ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿನಿ ರಂಗದ ಕ್ಯೂಟೆಸ್ಟ್ ಕಪಲ್ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಇದೀಗ ಮತ್ತೆ ಆನ್‌ಸ್ಕ್ರೀನ್ ಕಾಣಿಸಿಕೊಳ್ಳಲಿದ್ದಾರೆ.
ಗೀತಾಗೋವಿಂದಂ ಮೂಲಕ ತೆರೆ ಮೇಲೆ ಕಾಣಿಸಿಕೊಂಡ ಜೋಡಿ ಡಿಯರ್ ಕಾಮ್ರೆಡ್ ಮೂಲಕ ಮೋಡಿ ಮಾಡಿತ್ತು. ಅದಾದ ನಂತರ ವಿಜಯ್ ಹಾಗೂ ರಶ್ಮಿಕಾ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಸದ್ಯ ರಶ್ಮಿಕಾ ಮಂದಣ್ಣ ಪುಷ್ಪಾ 2 ಚಿತ್ರದಲ್ಲಿ ಬ್ಯೂಸಿ ಇದ್ದಾರೆ. ಇದರ ಜೊತೆಗೆ ಕೆಲ ಚಿತ್ರಗಳನ್ನು ರಶ್ಮಿಕಾ ಮಂದಣ್ಣ ಒಪ್ಪಿಕೊಂಡಿದ್ದಾರೆ. ಇದರ ನಡುವೆ ರಾಹುಲ್ ನಿರ್ದೇಶನದ ನೂತನ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಮಾಹಿತಿ ಹರಡಿದೆ.