ಕ್ರೀಡಾಪಟು ಆಶಾ ಮಾಳವೀಯ ಸೈಕಲ್‌ ಯಾತ್ರೆಗೆ ಶುಭ ಹಾರೈಸಿದ ಸಿಎಂ ಸಿದ್ದು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪರ್ವತಾರೋಹಿ ಹಾಗು ರಾಷ್ಟ್ರಮಟ್ಟದ ಮಹಿಳಾ ಕ್ರೀಡಾಪಟು ಆಶಾ ಮಾಳವೀಯ ಅವರ ಸಾಧನೆ ಮತ್ತು ಅವರು ಹಮ್ಮಿಕೊಂಡಿರುವ 28 ರಾಜ್ಯಗಳ ಸೈಕಲ್ ಯಾತ್ರೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಭ ಹಾರೈಸಿದ್ದಾರೆ.

ಪರ್ವತಾರೋಹಿಯಾಗಿ ಹಲವು ದಾಖಲೆಗಳನ್ನು ನಿರ್ಮಿಸಿರುವ ಮಧ್ಯಪ್ರದೇಶದ ಯುವತಿ ಆಶಾ ಮಾಳವೀಯ, ಸಿದ್ದರಾಮಯ್ಯರನ್ನು ಭೇಟಿಯಾಗಿ, ಸ್ತ್ರೀ ಸಬಲೀಕರಣ ಹಾಗೂ ಸ್ತ್ರೀ ಸುರಕ್ಷತೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ದೇಶದ ಎಲ್ಲ ರಾಜ್ಯಗಳನ್ನು ಒಳಗೊಂಡಂತೆ ಒಟ್ಟು 25,000 ಕಿ.ಮೀ ಸೈಕಲ್‌ ಯಾತ್ರೆ ನಡೆಸುತ್ತಿದ್ದೇನೆ. ಅದರ ಭಾಗವಾಗಿ ಕರ್ನಾಟಕಕ್ಕೆ ಬಂದಿರುವುದಾಗಿ ತಿಳಿಸಿದರು.

ಸಿಎಂ ಈ ವಿಷಯ ಕೇಳಿ ಖುಷಿಪಟ್ಟಿದ್ದು, ಅಭಿನಂದನೆಗಳನ್ನು ತಿಳಿಸಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!