ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದಲ್ಲಿ ಡೆಂಗ್ಯೂ ಮಹಾಮಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಡೆಂಗ್ಯೂ ಜ್ವರವು ನೂರಾರು ಜನರನ್ನು ಬಾಧಿಸುತ್ತಿದೆ ಮತ್ತು ಪ್ರತಿದಿನ ಜೀವವನ್ನು ಬಲಿ ತೆಗೆದುಕೊಳ್ಳುತ್ತಿದೆ.
ಇದೀಗ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡೆಂಗ್ಯೂ ಜ್ವರವನ್ನು ಎದುರಿಸಲು ಮಾರ್ಗಸೂಚಿಗಳನ್ನು ಹೊರಡಿಸಿದೆ. ಹೀಗಾಗಿ ಡೆಂಗ್ಯೂ ಜ್ವರದ ಚಿಕಿತ್ಸೆಗೆ ಸಂಬಂಧಿಸಿದಂತೆ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಬಿಬಿಎಂಪಿ ಮತ್ತು ಡಿಎಚ್‌ಒ ಆರೋಗ್ಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಸದ್ಯ ರಾಜ್ಯದಲ್ಲಿ ಡೆಂಗ್ಯೂ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಮಳೆಗಾಲದಲ್ಲಿ ಡೆಂಗ್ಯೂ ಪ್ರಕರಣಗಳ ಚಿಕಿತ್ಸೆ ಮತ್ತು ಸರಿಯಾದ ನಿರ್ವಹಣೆ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಈ ಕೆಳಗಿನ ಮಾರ್ಗಸೂಚಿಗಳನ್ನು ಹೊರಡಿಸಿದೆ.
ಮಾರ್ಗಸೂಚಿಗಳು:
1 ಕಂಟ್ರೋಲ್ ರೂಮ್ ಅಥವಾ ವಾರ್ ರೂಂ ಸ್ಥಾಪನೆ. ಪಾಲಿಕೆ, ಜಿಲ್ಲಾಮಟ್ಟದಲ್ಲಿ ಟಿಎಸಿ ಸಭೆ ಮಾಡುವಂತೆ ಸೂಚನೆ.
2 ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು 15 ದಿನಗಳಿಗೊಮ್ಮೆ ಮನೆ ಸರ್ವೆ ಮಾಡಬೇಕು.
ಪ್ರತಿ ಶುಕ್ರವಾರ ಫೀಲ್ಡ್ ವರ್ಕ್ ಮಾಡಿ ಲಾರ್ವ ನಾಶ ಪಡಿಸಬೇಕು.
3 ಡೆಂಗ್ಯೂ ಹಾಟ್ ಸ್ಪಾಟ್ ಗುರುತಿಸಬೇಕು ಅದರ ಮಾಹಿತಿಯನ್ನ ಕಂಟ್ರೋಲ್ ರೂಂಗೆ ನೀಡಬೇಕು.
ಹಾಟ್ ಸ್ಪಾಟ್ಗಳಲ್ಲಿ ಲಾರ್ವ ನಾಶವನ್ನ ತೀವ್ರಗತಿಗೊಳಿಸಬೇಕು.
4 ಫೀವರ್ ಕ್ಲಿನಿಕ್ಗಳನ್ನ ತೆರೆಯಬೇಕು.
5 ಹಾಟ್ ಸ್ಪಾಟ್ಗಳಲ್ಲಿ ಬಿಪಿಎಲ್ ಕುಟುಂಬಗಳಿಗೆ ಸೊಳ್ಳೆನಿರೋಧಕ ಬೇವಿನ ಎಣ್ಣೆಯನ್ನ ಕೈಕಾಲುಗಳಿಗೆ ಹಚ್ಚಲು ನೀಡಬೇಕು.
6 ಡೆಂಗ್ಯೂ ಗುಣಲಕ್ಷಣಗಳು ಬಂದಾಗಿನ 14 ದಿನಗಳ ಕಾಲ ರೋಗಿಯ ಮಾಹಿತಿಯನ್ನ ವಾರ್ ರೂಂಗೆ ತಿಳಿಸಬೇಕು.
7 ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಕನಿಷ್ಠ 5 ಬೆಡ್ ಮೀಸಲಿಡಬೇಕು.
8 ಟೆಸ್ಟಿಂಗ್ ಕಿಟ್, ಔಷಧ, ವೈಟ್ ಪ್ಲೇಟ್ ಲೇಸ್ಟ್ಗಳು ಇದಿಯಾ ಎಂದು ಮಾಹಿತಿ ನೀಡಬೇಕು.
9 ಡೆಂಗ್ಯೂ ನಿರ್ವಹಣೆ ಸಂಬಂಧ ಶಿಷ್ಟಾಚಾರನ್ನು ಕಡ್ಡಾಯವಾಗಿ ಎಲ್ಲಾ ವೈದ್ಯರು ಪಾಲಿಸುವುದು.
10 ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ, ಡೆಂಗ್ಯೂ ಪ್ರಕರಣಗಳ ನಿಯಂತ್ರಣಕಾಗಿ ಕಟ್ಟುನಿಟ್ಟಾಗಿ ಪಾಲಿಸುವಂತೆ ಸೂಚನೆ.