ಹೊಸದಿಗಂತ ವರದಿ,ವಿಜಯಪುರ:
ಮದ್ಯ ಸೇವಿಸಿ ಶಾಲಾ ತರಗತಿ ಕೋಣೆಯಲ್ಲಿ ನಶೆಯಲ್ಲಿ ಕುಳಿತ್ತಿದ್ದ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕನನ್ನು ಅಮಾನತು ಮಾಡಿ, ಡಿಡಿಪಿಐ ಎನ್.ಎಚ್. ನಾಗೂರ ಆದೇಶ ಹೊರಡಿಸಿದ್ದಾರೆ.
ಬಬಲೇಶ್ವರ ತಾಲೂಕಿನ ಕಂಬಾಗಿ ತೋಟದ ವಸತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಎ.ಸಿ. ನಾರಾಯಣಪುರ, ಶಾಲೆಯಲ್ಲಿಯೇ ಮದ್ಯ ಸೇವಿಸಿ, ತರಗತಿ ಕೋಣೆಯಲ್ಲಿ ನಶೆಯಲ್ಲಿ ಕುಳಿತ್ತಿದ್ದು, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಮೋದಿನಿ ಬಳೂಲಮಟ್ಟಿ ಅವರು ಸಿಆರ್ ಪಿಗಳೊಂದಿಗೆ ಸಹ ಶಿಕ್ಷಕ ಎ.ಸಿ. ನಾರಾಯಣಪುರ ಈತನನ್ನು ಸರ್ಕಾರಿ ವಾಹನದಲ್ಲಿ ಕರೆತಂದು, ಜಿಲ್ಲಾಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದಾಗ, ಸಹ ಶಿಕ್ಷಕ ಮದ್ಯ ಸೇವಿಸಿರುವುದನ್ನು ದೃಢಪಡಿಸಿ, ಜಿಲ್ಲಾಸ್ಪತ್ರೆ ವೈದ್ಯರು ವರದಿ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಉತ್ತಮ ಪಾಠ ಮಾಡಬೇಕಾದ ಹಾಗೂ ಸಮಾಜಕ್ಕೆ ಮಾದರಿ ಆಗಬೇಕಾದ ಶಿಕ್ಷಕ ಶಾಲಾ ಕೋಣೆಯಲ್ಲಿ ಮದ್ಯ ಸೇವಿಸಿ ಕರ್ತವ್ಯಲೋಪ ಎಸಗಿರುವ, ಕ್ಷೇತ್ರ ಶಿಕ್ಷಣಾಧಿಕಾರಿ ವರದಿ ಆದರಿಸಿ, ಸಹ ಶಿಕ್ಷಕ ಎ.ಸಿ. ನಾರಾಯಣಪುರನನ್ನು ಅಮಾನತು ಮಾಡಲಾಗಿದೆ.