ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಿಂದಿ ಕಿರುತೆರೆ ನಟಿ ಜಾಸ್ಮಿನ್ ಭಾಸಿನ್ಗೆ ಕಣ್ಣೇ ಕಾಣಿಸುತ್ತಿಲ್ಲ. ಈ ಬಗ್ಗೆ ನಟಿಯೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಕಾಂಟಾಕ್ಟ್ ಲೆನ್ಸ್ ಬಳಸಿ ಸ್ವಲ್ಪ ಸಮಯಕ್ಕೇ ಕಣ್ಣು ಉರಿ ಹಾಗೂ ನೋವಾಗಿದ್ದು, ತಕ್ಷಣವೇ ಲೆನ್ಸ್ ತೆಗೆದುಹಾಕಿದ್ದಾರೆ. ಇದಾದ ಬಳಿಕ ವೈದ್ಯರ ಬಳಿ ಹೋಗಿದ್ದು, ಕಾರ್ನಿಯಲ್ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ನಾನು ವೈದ್ಯರ ನೋಡಬೇಕು ಎಂದುಕೊಂಡೆ. ಆದರೆ ಕೆಲಸದ ಕಾರಣದಿಂದ ಅದು ಸಾಧ್ಯವಾಗಿಲ್ಲ. ನಾನು ಮೊದಲು ಕಾರ್ಯಕ್ರಮದಲ್ಲಿ ಭಾಗಿ ಆಗಿ ಆ ಬಳಿಕ ವೈದ್ಯರನ್ನು ನೋಡಬೇಕು ಎಂದುಕೊಂಡೆ. ಹೀಗಾಗಿ ಈವೆಂಟ್ನಲ್ಲಿ ನಾನು ಸನ್ಗ್ಲಾಸ್ ಧರಿಸಿದೆ.
ಈ ವಿಚಾರವನ್ನು ನನ್ನ ಟೀಂನವರು ಒಳ್ಳೆಯ ರೀತಿಯಲ್ಲಿ ಹ್ಯಾಂಡಲ್ ಮಾಡಿದರು. ಈ ಘಟನೆ ಬಳಿಕ ನನಗೆ ಸರಿಯಾಗಿ ಕಾಣುತ್ತಿಲ್ಲ. ನಾನು ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿದ್ದೇನೆ. ಅವರು ಪರೀಕ್ಷೆ ಮಾಡಿ ಹೇಳಿದ ಪ್ರಕಾರ ನನ್ನ ಕಾರ್ನಿಯಲ್ಗೆ ಡ್ಯಾಮೇಜ್ ಆಗಿದೆಯಂತೆ. ಅವರು ಕಣ್ಣಿಗೆ ಬ್ಯಾಡ್ಜ್ ಹಾಕಿದ್ದಾರೆ ಎಂದು ಜಾಸ್ಮಿನ್ ಹೇಳಿದ್ದಾರೆ.