January14, 2026
Wednesday, January 14, 2026
spot_img

SHOCKING | ಚಿಪ್ಸ್‌ ಪ್ಯಾಕೆಟ್‌ ಓಪನ್‌ ಮಾಡ್ತಿದ್ದಂತೆಯೇ ಬ್ಲಾಸ್ಟ್‌, ಮಗು ಕಣ್ಣೇ ಹೋಯ್ತು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಎಂಟು ವರ್ಷದ ಬಾಲಕನೊಬ್ಬ ತಿಂಡಿ ಪ್ಯಾಕೆಟ್ ಒಳಗೆ ಸಿಕ್ಕ ಆಟಿಕೆ ಸ್ಫೋಟಗೊಂಡು ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿರುವ ಆಘಾತಕಾರಿ ಘಟನೆ ಒಡಿಶಾದ ಬಲಂಗೀರ್ ಜಿಲ್ಲೆಯಲ್ಲಿ ನಡೆದಿದೆ.

ಆ ಬಾಲಕ ಸ್ಥಳೀಯ ಅಂಗಡಿಯಿಂದ ಐದು ರೂಪಾಯಿ ಬೆಲೆಯ ‘ಲೈಟ್ ಹೌಸ್’ ಕಾರ್ನ್ ಪಫ್‌ಗಳ ಪ್ಯಾಕೆಟ್ ಖರೀದಿಸಿದ್ದ ಎನ್ನಲಾಗಿದೆ.

ತಿಂಡಿ ತಿಂದ ನಂತರ, ಬಾಲಕ ಆಟಿಕೆಯೊಂದಿಗೆ ಆಟವಾಡುತ್ತಿದ್ದಾಗ, ಅದು ಸ್ಫೋಟಗೊಂಡು ಅವನ ಕಣ್ಣಿಗೆ ಬಡಿಯಿತು. ಪರಿಣಾಮ ಅವನ ಕಣ್ಣುಗುಡ್ಡೆ ಛಿದ್ರವಾಯಿತು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಕಣ್ಣಿಗೆ ಶಾಶ್ವತವಾಗಿ ಹಾನಿಯಾಗಿದೆ ಎಂದು ದೃಢಪಡಿಸಿದರು.

ಬಾಲಕನ ಪೋಷಕರು ಪೊಲೀಸರಿಗೆ ದೂರು ನೀಡಿ ಉತ್ಪನ್ನವನ್ನು ಸಂಪೂರ್ಣವಾಗಿ ನಿಷೇಧಿಸಬೇಕೆಂದು ಒತ್ತಾಯಿಸಿದ್ದಾರೆ. ತಯಾರಿಕಾ ಕಂಪನಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಗಾಯಗೊಂಡ ತಮ್ಮ ಮಗುವಿಗೆ ತಕ್ಷಣ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

Most Read

error: Content is protected !!