ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ತಮ್ಮ ಮುಂದಿನ ಸಿನಿಮಾ ಖೇಲ್ ಖೇಲ್ ಮೇ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಅಕ್ಷಯ್ ಕುಮಾರ್, ಸಿನಿಮಾಗಳಲ್ಲಿ ಆಯಕ್ಷನ್ ಸೀಕ್ವೆನ್ಸ್ ಮಾಡಲು ಅವರಿಗೆ ಏನು ಸ್ಫೂರ್ತಿ ಎಂಬುದನ್ನು ಬಹಿರಂಗಪಡಿಸಿದ್ದಾರೆ.
ಟಾಮ್ ಆಯಂಡ್ ಜೆರ್ರಿಯನ್ನು ಎಲ್ಲರೂ ನೋಡುವುದು ಕಾಮಿಡಿ ಎಂಬ ದೃಷ್ಟಿಕೋನದಲ್ಲಿ. ಆದರೆ ಅಕ್ಷಯ್ ಕುಮಾರ್ ಅವರು ಟಾಮ್ ಆಯಂಡ್ ಜೆರ್ರಿಯನ್ನು ಕಾಮಿಡಿ ಅಲ್ಲ, ಹಿಂಸೆ ಎಂದು ಹೇಳಿದ್ದಾರೆ.
ತಮ್ಮ ಸಾಹಸ ದೃಶ್ಯಗಳಿಗೆ ಟಾಮ್ ಆಯಂಡ್ ಜೆರ್ರಿಯೇ ಸ್ಫೂರ್ತಿ ಎಂದ ಅಕ್ಷಯ್ , ಟಾಮ್ ಆಯಂಡ್ ಜೆರ್ರಿ ಹಾಸ್ಯವಲ್ಲ, ಅದು ಹಿಂಸೆ. ನಾನು ನಿಮಗೆ ಒಂದು ರಹಸ್ಯವನ್ನು ಹೇಳುತ್ತೇನೆ. ನಾನು ಎಷ್ಟು ಆಕ್ಷನ್ (ದೃಶ್ಯಗಳನ್ನು) ಮಾಡಿದ್ದೇನೆ, ಬಹಳಷ್ಟು ಬಾರಿ ನಾನು ಅದಕ್ಕೆ ಟಾಮ್ ಆಯಂಡ್ ಜೆರ್ರಿಯಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ತಿಳಿಸಿದರು.
ಅದಷ್ಟೇ ಅಲ್ಲ ನ್ಯಾಷನಲ್ ಜಿಯೋಗ್ರಫಿಕ್ನಿಂದಲೂ ಆಯಕ್ಷನ್ ಸೀಕ್ವೆನ್ಸ್ಗಳಿಗೆ ಸಾಕಷ್ಟು ಸ್ಫೂರ್ತಿಪಡೆಯಬಹುದು. ನ್ಯಾಷನಲ್ ಜಿಯೋಗ್ರಫಿಕ್ನಲ್ಲಿ ಉತ್ತಮ ಸಾಹಸ ದೃಶ್ಯಗಳನ್ನು ನೋಡಬಹುದು. ಟಾಮ್ ಆಯಂಡ್ ಜೆರ್ರಿ ಮತ್ತು ನ್ಯಾಷನಲ್ ಜಿಯೋಗ್ರಫಿಕ್ನಿಂದ ಕಲಿತಿರುವ ಸಾಹಸ ದೃಶ್ಯಗಳನ್ನು ಹೇಳುವುದು ಅಸಾಧ್ಯ ಎಂದು ಹೇಳಿದ್ದಾರೆ.
ಅಕ್ಷಯ್ ಕುಮಾರ್ ಅಭಿನಯದ ಖೇಲ್ ಖೇಲ್ ಮೇ ಚಿತ್ರ ಆಗಸ್ಟ್ 15ರಂದು ಬಿಡುಗಡೆಯಾಗಲಿದೆ.