ಯಾರೂ ಸಹ ಕರೆ ಮಾಡಬೇಡಿ, ನನ್ನ ಫೋನ್, ವಾಟ್ಸ್ ಆಪ್ ಹ್ಯಾಕ್ ಆಗಿದೆ: ಸುಪ್ರಿಯಾ ಸುಳೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಪುತ್ರಿ, ಸಂಸದೆ ಸುಪ್ರಿಯಾ ಸುಳೆ ಅವರ ಫೋನ್ ಹ್ಯಾಕ್ ಆಗಿದೆ. ಇದರ ಜೊತೆಗೆ ಅವರ ವಾಟ್ಸ್ ಆಪ್ ಕೂಡ ಹ್ಯಾಕ್ ಆಗಿದೆ ಎಂದು ಹೇಳಿದ್ದಾರೆ.

ಈ ಕುರಿತು ಪೋಸ್ಟ್​ ಮಾಡಿರುವ ಅವರು, ಯಾರೂ ಸಹ ಕರೆ ಮಾಡಬೇಡಿ ಅಥವಾ ಸಂದೇಶಗಳನ್ನು ಕಳುಹಿಸಬೇಡಿ ಎಂದು ಅವರು ಕೇಳಿಕೊಂಡಿದ್ದಾರೆ. ಹ್ಯಾಕ್​ ಆಗಿರುವ ಕುರಿತು ಪೊಲೀಸರಿಗೆ ದೂರು ನೀಡಿರುವುದಾಗಿ ಸುಪ್ರಿಯಾ ಸುಳೆ ತಿಳಿಸಿದ್ದಾರೆ.

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಸುಪ್ರಿಯಾ ಸುಳೆ ಬಾರಾಮತಿ ಕ್ಷೇತ್ರದಿಂದ 1.55 ಲಕ್ಷ ಮತಗಳ ಭಾರಿ ಬಹುಮತದಿಂದ ಗೆದ್ದಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!