ವಿದಾಯದ ಭಾಷಣ ಮಾಡಿದ ಅಮೆರಿಕ ಅಧ್ಯಕ್ಷ: ಚಪ್ಪಾಳೆಯ ಸುರಿಮಳೆ ಕಂಡು ಕಣ್ಣೀರಿಟ್ಟ ಜೋ ಬೈಡನ್!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಅಮೆರಿಕಾದ ಅಧ್ಯಕ್ಷ ಜೋ ಬೈಡನ್ ತಮ್ಮ ರಾಜಕೀಯದ ಕೊನೆಯ ಭಾಷಣ ಮಾಡಿದರು. ಈ ವೇಳೆ ಮೆರಿಕಾದ ಪ್ರಜೆಗಳು ಮನದುಂಬಿ ವಿದಾಯ ಹೇಳಿದರು.

ಡೆಮಾಕ್ರಟಿಕ್ ನ್ಯಾಷನಲ್ ಸಮಾವೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಜೋ ಬೈಡನ್​ಗೆ ನೆರೆದಿದ್ದ ಸಹಸ್ರ ಸಹಸ್ರ ಸಂಖ್ಯೆಯ ಬೆಂಬಲಿಗರು ನಿರಂತರ 4 ನಿಮಿಷಗಳ ಕಾಲ ಎದ್ದು ನಿಂತು ಚಪ್ಪಾಳೆ ತಟ್ಟುವ ಮೂಲಕ ತಮ್ಮ ಅಧ್ಯಕ್ಷನನ್ನು ಬೀಳ್ಕೊಟ್ಟರು.

81 ವರ್ಷದ ಜೋ ಬೈಡನ್ ಹಲವು ವಾರಗಳ ಹಿಂದೆಯೇ ಎಲೆಕ್ಷನ್ ಅಂಗಳದಿಂದ ಹಿಂದೆ ಸರಿಯಬೇಕು ಎಂಬ ವಾದಗಳು ಕೇಳಿ ಬಂದಿದ್ದವು. ಕೊನೆಗೆ ಜೋ ಬೈಡನ್ ಆ ನಿರ್ಧಾರಕ್ಕೂ ಬಂದರು. ನ್ಯಾಷನಲ್ ಡೆಮಾಕ್ರಟಿಕ್ ಪಕ್ಷದ ಮುಂದಿನ ಅಧ್ಯಕ್ಷ ಅಭ್ಯರ್ಥಿಯನ್ನಾಗಿ ಕಮಲಾ ಹ್ಯಾರಿಸ್​ ಹೆಸರು ಸೂಚಿಸುವ ಮೂಲಕ ಸಕ್ರಿಯ ರಾಜಕಾರಣದಿಂದ ಜೋ ಬೈಡನ್ ದೂರ ಸರಿದರು. ದೂರ ಸರಿದ ನಾಯಕನಿಗೆ ಹೃದಯತುಂಬಿ ವಿದಾಯ ಹೇಳುವುದಕ್ಕೂ, ಒಂದು ಪ್ರೀತಿ ಭರಿತ ನಿರ್ಗಮನಕ್ಕೂ ಸೋಮವಾರ ಅಂದ್ರೆ ಆಗಸ್ಟ್ 19 ರ ರಾತ್ರಿ ಚಿಕಾಗೋದಲ್ಲಿ ನಡೆದ ನ್ಯಾಷನಲ್ ಡೆಮಾಕ್ರಟಿಕ್ ಸಮಾವೇಶ ಸಾಕ್ಷಿಯಾಗಿತ್ತು.

ನಾನು ನನ್ನ ಬದುಕಿನಲ್ಲಿ ಅನೇಕ ತಪ್ಪುಗಳನ್ನು ಮಾಡಿದ್ದೇನೆ. ಆದ್ರೆ ನಾನು ದೇಶಕ್ಕೆ ಹೆಚ್ಚು ಒಳ್ಳೆಯದನ್ನೇ ನೀಡಿದ್ದೇನೆ ಎಂದು ಬೈಡನ್ ತಮ್ಮ ಭಾಷಣದಲ್ಲಿ ಹೇಳಿದ್ರು. ತಮ್ಮ ಭಾಷಣದುದ್ದಕ್ಕೂ ತಮ್ಮ ಆಡಳಿತಾವಧಿಯಲ್ಲಿ ತೆಗೆದುಕೊಂಡು ನಿರ್ಧಾರಗಳ ಸಮರ್ಥನೆಯನ್ನು ಮಾಡುವುದರ ಜೊತೆಗೆ, ಎದುರಾಳಿ ಡೊನಾಲ್ಡ್ ಟ್ರಂಪ್​ ವಿರುದ್ದವೂ ಹರಿಹಾಯ್ದರು.

ನಿರಂತರ 4 ನಿಮಿಷಗಳ ಕಾಲ ಚಪ್ಪಾಳೆ ತಟ್ಟುವ ಮೂಲಕ ಥ್ಯಾಂಕ್ಯು ಜೋ ಎಂಬ ಘೋಷಣೆಯೂ ಕೂಡ ಸಭಿಕರಿಂದ ಕೇಳಿ ಬಂತು. ಅದಕ್ಕೆ ಥ್ಯಾಂಕ್ಯು ಅಮೆರಿಕಾ ಎಂದ ಜೋ ಬೈಡನ್ ಮನದುಂಬಿ ಕೃತಜ್ಞತೆ ಸಲ್ಲಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!