ನಾಳೆ ಭಾರತ್ ಬಂದ್‌ಗೆ ಕರೆ: ಮುಷ್ಕರಕ್ಕೆ ಕಾರಣವೇನು? ಶಾಲೆಗಳಿಗೆ ರಜೆ ಇರುತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಸ್​ಸಿ, ಎಸ್​ಟಿ ಒಳಪಂಗಡಗಳ ಕುರಿತಾಗಿ ಸುಪ್ರೀಂಕೋರ್ಟ್​ ನೀಡಿದ್ದ ಆದೇಶವನ್ನು ವಿರೋಧಿಸಿ ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ನಾಳೆ (ಆಗಸ್ಟ್‌ 21 ರಂದು) ಭಾರತ್ ಬಂದ್​ಗೆ ಕರೆ ಕೊಟ್ಟಿದೆ. ​

ಉತ್ತರ ಪ್ರದೇಶ ಹಾಗೂ ರಾಜಸ್ತಾನದಲ್ಲಿ ಬಂದ್​ನ ತೀವ್ರತೆಯು ಹೆಚ್ಚಾಗುವ ಮುನ್ಸೂಚನೆಯಿದ್ದು ಪ್ರಮುಖವಾಗಿ ಆ ಎರಡು ರಾಜ್ಯಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಹೆಚ್ಚುವರಿ ಪೊಲೀಸ್ ಪಡೆ ಸೇರಿದಂತೆ ಹಲವು ರೀತಿಯ ಭದ್ರತಾ ಪಡೆಗಳನ್ನು ನೇಮಿಸಲಾಗುತ್ತಿದೆ.

ಭಾರತ್ ಬಂದ್​ಗೆ ಕಾರಣವೇನು?
ಹಲವು ವರದಿಗಳ ಪ್ರಕಾರ ಇತ್ತೀಚೆಗೆ ಸುಪ್ರೀಂಕೋರ್ಟ್ ನೀಡಿದ ಒಂದು ತೀರ್ಪು ಈಗ ಭಾರತ್ ಬಂದ್​ಗೆ ಕಾರಣವಾಗಿದೆ. ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯ ಎಸ್​ಸಿ ಎಸ್​ಟಿಗೆ ಸಮುದಾಯಗಳಲ್ಲೂ ಒಳಪಂಗಡಗಳನ್ನು ಗುರುತಿಸುವಂತೆ ಎಂದು ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿತ್ತು. ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ನಡೆಸಲು ರಿಸರ್ವೆಷನ್ ಬಚಾವೋ ಸಂಘರ್ಷ ಸಮಿತಿ ಸಜ್ಜಾಗಿದೆ. ತಮ್ಮ ಬಂದ್​ಗೆ ಬೆಂಬಲಿಸಬೇಕು ಎಂದು ಹಲವು ರಾಹಕೀಯ ಹಾಗೂ ಸಾಮಾಜಿಕ ಸಂಘಟನೆಗಳಿಗೆ ಮನವಿಯನ್ನು ಕೂಡ ಮಾಡಲಾಗಿದೆ.

ಇದೀಗ ಆಗಸ್ಟ್ 21ರ ಭಾರತ್ ಬಂದ‌ಗೆ ಯಾವ ಸೌಲಭ್ಯಗಳು ಬಂದ್ ಆಗಲಿದೆ? ಯಾವ ಸೇವೆ ಲಭ್ಯವಿರಲಿದೆ ಅನ್ನೋ ಆತಂಕ ಜನರಲ್ಲಿ ಹೆಚ್ಚಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್ ಮೀಸಲಾತಿ ವಿಚಾರದಲ್ಲಿ ಆಯಾ ರಾಜ್ಯಗಳು ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡ ಹಾಗೂ ಬುಡಕಟ್ಟು ಸಮುದಾಯ ಮೀಸಲಾತಿಯಲ್ಲಿ ಉಪ ವಿಭಾಗಗಳನ್ನು ಸೃಷ್ಟಿಸಿ ನಿಜಕ್ಕೂ ಅಗತ್ಯವಿರುವ ಸಮುದಾಯದ ಜನರಿಗೆ ಮೀಸಲಾತಿ ಕಲ್ಪಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದು ಹಲವು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಎಸ್‌ಸಿ, ಎಸ್‌ಟಿ ಮೀಸಲಾತಿ ಸಾಕಾಗುತ್ತಿಲ್ಲ, ಇದರ ನಡುವೆ ಸಬ್ ಕೆಟಗರಿ ಸೃಷ್ಟಿಸಿ ಮೀಸಲಾತಿ ಹಂಚಿದರೆ ಅನ್ಯಾಯವಾಗಲಿದೆ. ನಮ್ಮಿಂದ ಕಿತ್ತುಕೊಂಡು ಇತರರಿಗೆ ನೀಡಿದರೆ ನಮ್ಮ ಸಮುದಾಯಕ್ಕೆ ವಂಚನೆಯಾಗಲಿದೆ ಎಂದು ಆಕ್ರೋಶಗಳು ಆರಂಭಗೊಂಡಿತ್ತು. ಇದೀಗ ಈ ತೀರ್ಪಿನ ವಿರೋಧಿಸಿ ದೇಶಾದ್ಯಂತ ಭಾರತ್ ಬಂದ್‌ಗೆ ಕರೆ ನೀಡಲಾಗಿದೆ.

ಯಾವ ಸೇವೆ ಅಲಭ್ಯ?
ಭಾರತ್ ಬಂದ್ ಪ್ರತಿಭಟನೆಯಿಂದ ಮುನ್ನಚರಿಕಾ ಕ್ರಮವಾಗಿ ಹೈದರಾಬಾದ್ ಸೇರಿದಂತೆ ಕೆಲ ಪ್ರದೇಶದಲ್ಲಿ ಶಾಲಾ ಕಾಲೇಜಿಗೆ ರಜೆ ಘೋಷಣೆಗೆ ಚಿಂತನೆ ನಡೆಸಲಾಗಿದೆ. ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಸುತ್ತಮುತ್ತಲಿನ ರಾಜ್ಯಗಳಲ್ಲಿ ಪ್ರತಿಭಟನೆ ತೀವ್ರಗೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಈಗಾಗಲೇ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜಿಸಲಾಗುತ್ತಿದೆ. ಇದರ ಜೊತೆಗೆ ಕೆಲ ಸಂಸ್ಥೆಗಳು ರಜೆ ಘೋಷಣೆಗೆ ತಯಾರಿ ನಡೆಸಿದೆ.

ದೇಶಾದ್ಯಂತ ಶಾಲಾ-ಕಾಲೇಜುಗಳು ಇದುವರೆಗೂ ರಜೆ ಘೋಷಣೆ ಮಾಡಿಲ್ಲ.

ಎಂದಿನಂತೆ ಆ್ಯಂಬುಲೆನ್ಸ್ ಸೇರಿ ಹಲವು ವೈದ್ಯಕೀಯ ಸೌಲಭ್ಯಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಸಾರಿಗೆ, ಸಂಪರ್ಕಗಳು, ದಿನನಿತ್ಯದ ಅಂಗಡಿ ಮುಗ್ಗಟ್ಟುಗಳು ತೆರೆಯಲಿವೆಯಾ, ಇಲ್ಲ ಬಂದ್ ಆಗಲಿಯಾ ಅನ್ನುವ ಸ್ಪಷ್ಟನೆ ಇನ್ನೂ ಸಿಕ್ಕಿಲ್ಲ.

ಸಾರಿಗೆ ಸಂಪರ್ಕ ಸಂಪೂರ್ಣ ಬಂದ್ ಆಗುವ ಸಾಧ್ಯತೆ ಇದೆ. ಹೊಟೆಲ್ ಸೇರಿದಂತೆ ಅಂಗಡಿ ಮುಂಗಟ್ಟುಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಮುಚ್ಚುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ತುರ್ತು ಅವಶ್ಯಕತೆಗಳನ್ನು ಹೊರತುಪಡಿಸಿ ಇತರ ಸೇವೆಗಳು ಬಂದ್ ಆಗುವ ಸಾಧ್ಯತೆ ಇದೆ. ಆದರೆ ಇದೇ ದೇಶಾದ್ಯಂತ ಚಿತ್ರಣ ಪ್ರತಿಭಟನೆ ಆರಂಭದ ಬಳಿಕವಷ್ಟೇ ತಿಳಿಯಲಿದೆ. ದಕ್ಷಿಣ ಭಾರತ ರಾಜ್ಯಗಳಲ್ಲಿ ಬಂದ್ ತೀವ್ರತೆ ಕಡಿಮೆ ಇರಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ ಶಾಲಾ ಕಾಲೇಜು, ಬ್ಯಾಂಕ್ ಸೇರಿದಂತೆ ಕೆಲ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ.

ಎಲ್ಲಾ ರಾಜ್ಯಗಳ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಈಗಾಗಲೇ ತುರ್ತು ಸಭೆ ನಡೆಸಲಾಗಿದೆ. ಪರಿಸ್ಥಿತಿ ನೋಡಿಕೊಂಡು ಕಠಿಣ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!