ತೋಳಗಳನ್ನು ಹಿಡಿಯೋಕೆ ಲೇಟೆಸ್ಟ್‌ ಐಡಿಯಾ, ಇದಕ್ಕಾಗಿ ಮಕ್ಕಳ ʼಸುಸುʼ ಬಳಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಉತ್ತರ ಪ್ರದೇಶದ ಬಹ್ರೈಚ್ ಜಿಲ್ಲೆಯಲ್ಲಿ ತೋಳಗಳನ್ನು ಹಿಡಿಯುವ ನಿಟ್ಟಿನಲ್ಲಿ ಇಲ್ಲಿನ ಅರಣ್ಯ ಇಲಾಖೆಯು ಮಕ್ಕಳ ಮೂತ್ರದಲ್ಲಿ ಅದ್ದಿದ ಬಣ್ಣಬಣ್ಣದ ಟೆಡ್ಡಿ ಗೊಂಬೆಗಳನ್ನು ಬಳಸುತ್ತಿದ್ದಾರೆ.

ಕಳೆದ ಕೆಲವು ತಿಂಗಳುಗಳಿಂದ, ಬಹ್ರೈಚ್ ಪ್ರದೇಶದಲ್ಲಿ ಮಕ್ಕಳು ಮತ್ತು ಗ್ರಾಮಸ್ಥರ ಮೇಲೆ ತೋಳಗಳ ದಾಳಿ ಹೆಚ್ಚಾಗುತ್ತಿದೆ. ಈ ಪರಭಕ್ಷಕಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆಯು ಈಗ ಗಾಢ ಬಣ್ಣದ “ಟೆಡ್ಡಿ ಗೊಂಬೆಗಳನ್ನು” ಇಟ್ಟು ಅದಕ್ಕೆ ತೋಳಗಳು ಬೀಳುವಂತೆ ಉಪಾಯ ಮಾಡುತ್ತಿದೆ.

ಈ ಗೊಂಬೆಗಳನ್ನು ನದಿಯ ದಡದ ಬಳಿ, ತೋಳಗಳು ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳದಲ್ಲಿ ಮತ್ತು ಗುಹೆಗಳ ಹತ್ತಿರ ಇರಿಸಲಾಗುತ್ತದೆ. ಮನುಷ್ಯನ ವಾಸನೆಯನ್ನು ಹಿಡಿದು ತೋಳಗಳು ಬರಲು ಮಕ್ಕಳ ಮೂತ್ರದಲ್ಲಿ ಗೊಂಬೆಗಳನ್ನು ಅದ್ದಿ ಇಡಲಾಗುತ್ತದೆ.

ತೋಳಗಳು ಸಾಮಾನ್ಯವಾಗಿ ರಾತ್ರಿಯಲ್ಲಿ ಬೇಟೆಯಾಡಿ ಬೆಳಗ್ಗೆ ಹೊತ್ತು ತಮ್ಮ ಗೂಡುಗಳಿಗೆ ಮರಳುತ್ತವೆ. ನಮ್ಮ ತಂತ್ರವು ಅವುಗಳನ್ನು ದಾರಿತಪ್ಪಿಸುವುದು ಮತ್ತು ವಸತಿ ಪ್ರದೇಶಗಳಿಂದ ದೂರ ಬಲೆಗಳು ಅಥವಾ ಪಂಜರಗಳ ಬಳಿಗೆ ಸೆಳೆಯುವುದಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಅಜಿತ್ ಹೇಳಿದರು. ಪ್ರತಾಪ್ ಸಿಂಹ ಹೇಳುತ್ತಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!