ಗಡಿಪಾರಿಗೆ ಮನವಿ ಸಲ್ಲಿಸುವವರೆಗೂ ಶೇಖ್ ಹಸೀನಾ ಭಾರತದಲ್ಲಿ ಸುಮ್ಮನಿದ್ದರೆ ಒಳಿತು: ಯೂನಸ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿರುವ ಶೇಖ್ ಹಸೀನಾ ಅಲ್ಲಿ ಕುಳಿತುಕೊಂಡು ರಾಜಕೀಯ ಹೇಳಿಕೆಗಳನ್ನು ನೀಡುವುದು ಉಭಯ ದೇಶಗಳಿಗೂ ಅನಾನುಕೂಲತೆ ಉಂಟು ಮಾಡುತ್ತದೆ ಎಂದು ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿರುವ ಮೊಹಮ್ಮದ್ ಯೂನಸ್ ಹೇಳಿದ್ದಾರೆ.

ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಮೊಹಮ್ಮದ್ ಯೂನಸ್, ಹಸೀನಾ ಹೇಳಿಕೆ ಇದು ಉಭಯ ದೇಶಗಳ ನಡುವಿನ ಮೈತ್ರಿಗೆ ವಿರುದ್ಧವಾದ ಲಕ್ಷಣವಾಗಿದೆ, ಆದ್ದರಿಂದ ಬಾಂಗ್ಲಾದೇಶ ಅವರ ಗಡಿಪಾರಿಗೆ ಮನವಿ ಸಲ್ಲಿಸುವವರೆಗೂ ಶೇಖ್ ಹಸೀನಾ ಭಾರತದಲ್ಲಿ ಸುಮ್ಮನಿರಬೇಕು ಎಂದು ಹೇಳಿದ್ದಾರೆ.

ಬಾಂಗ್ಲಾದೇಶ (ಸರ್ಕಾರ) ಆಕೆಯನ್ನು ಹಿಂತಿರುಗಿಸುವುದಕ್ಕೆ ಮನವಿ ಸಲ್ಲಿಸುವವರೆಗೂ ಭಾರತವು ಆಕೆಯನ್ನು ತನ್ನಲ್ಲಿಯೇ ಉಳಿಸಿಕೊಳ್ಳಲು ಬಯಸಿದರೆ, ಆಕೆ ಮೌನವಾಗಿರಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಬಾಂಗ್ಲಾ, ಭಾರತದೊಂದಿಗಿನ ಬಲವಾದ ಬಾಂಧವ್ಯ ಮೌಲ್ಯಯುತವಾದದ್ದು ಎಂದು ಗೌರವಿಸುತ್ತದೆ. ಭಾರತ ಅವಾಮಿ ಲೀಗ್ ಹೊರತುಪಡಿಸಿ ಉಳಿದೆಲ್ಲ ರಾಜಕೀಯ ಪಕ್ಷಗಳನ್ನು ಇಸ್ಲಾಮಿಸ್ಟ್ ಎಂದು ಬಿಂಬಿಸುವ ಮತ್ತು ಶೇಖ್ ಹಸೀನಾ ಇಲ್ಲದೆ ದೇಶವು ಅಫ್ಘಾನಿಸ್ತಾನವಾಗಿ ಬದಲಾಗುತ್ತದೆ ಎಂಬ ನಿರೂಪಣೆಯನ್ನು ಮೀರಿ ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ ಆಕೆಯ ನಿಲುವುಗಳು ಯಾರಿಗೂ ಹಿತಕರವಾಗಿಲ್ಲ. ಏಕೆಂದರೆ, ಆಕೆ ಭಾರತದಲ್ಲಿದ್ದಾರೆ ಮತ್ತು ಕೆಲವೊಮ್ಮೆ ಮಾತನಾಡುತ್ತಾರೆ. ಇದು ಸಮಸ್ಯಾತ್ಮಕವಾಗಿದೆ. ಆಕೆ ಸುಮ್ಮನಿದ್ದರೆ, ನಾವು ಅದನ್ನು ಮರೆತುಬಿಡುತ್ತಿದ್ದೆವು, ಶೇಖ್ ಹಸೀನಾ ತಮ್ಮದೇ ಆದ ಪ್ರಪಂಚದಲ್ಲಿ ಇರುತ್ತಿದ್ದ ಹಿನ್ನೆಲೆಯಲ್ಲಿ ಜನರೂ ಆಕೆಯನ್ನು ಮರೆತುಬಿಡುತ್ತಿದ್ದರು. ಆದರೆ ಆಕೆ ಮಾತನಾಡುತ್ತಾರೆ ಅದು ಯಾರಿಗೂ ಇಷ್ಟವಾಗುವುದಿಲ್ಲ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!