ಪ್ರವಾಹ ಪೀಡಿತ ಪ್ರದೇಶ ವೀಕ್ಷಣೆ ವೇಳೆ ದಿಢೀರ್ ಬಂದ ರೈಲು: ಕೂದಲೆಳೆ ಅಂತರದಲ್ಲಿ ಸಿಎಂ ಚಂದ್ರಬಾಬು ನಾಯ್ಡು ಪಾರು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಮತ್ತು ಅವರ ತಂಡ ರೈಲ್ವೇ ಹಳಿಯೊಂದರ ಕೆಳಗೆ ಜಲಾವೃತಗೊಂಡಿರುವ ಹೊಳೆಯನ್ನು ವೀಕ್ಷಿಸಲು ಹೋಗುತ್ತಿದ್ದಾಗ ವೇಗವಾಗಿ ರೈಲ್ವೆ ಹಳಿಯ ಮೇಲೆ ರೈಲು ಬಂದಿದೆ. ಈ ವೇಳೆ ಕೂದಲೆಳೆ ಅಂತರದಿಂದ ಸಿಎಂ ಚಂದ್ರಬಾಬು ನಾಯ್ಡು ಅಪಘಾತದಿಂದ ಪಾರಾಗಿದ್ದಾರೆ.

ಇದ್ದಕ್ಕಿದ್ದಂತೆ, ಒಂದು ರೈಲು ವಿರುದ್ಧ ದಿಕ್ಕಿನಿಂದ ಸಿಎಂ ಚಂದ್ರಬಾಬು ನಾಯ್ಡು ಅವರನ್ನು ಸಮೀಪಿಸಿತು. ಆಗ ಅವರ ಜೊತೆಗಿದ್ದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ರೈಲು ಮಾರ್ಗದಿಂದ ತ್ವರಿತವಾಗಿ ಹಿಂದೆ ಸರಿದಿದ್ದರಿಂದ ದುರಂತವೊಂದು ತಪ್ಪಿದಂತಾಗಿದೆ. ರೈಲು ಹಾದುಹೋದ ನಂತರ,ತಪಾಸಣೆಯನ್ನು ಮುಂದುವರೆಸಿತು.

ಸಿಎಂ ಚಂದ್ರಬಾಬು ನಾಯ್ಡು ಅವರು ಕಳೆದ ಕೆಲವು ದಿನಗಳಿಂದ ವಿಜಯವಾಡದಲ್ಲಿಯೇ ಉಳಿದುಕೊಂಡಿದ್ದು, ನಗರ ಮತ್ತು ಇತರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ಪ್ರಯತ್ನಗಳು ಮುಂದುವರಿದಿವೆ.

https://x.com/jsuryareddy/status/1831686533511819561?ref_src=twsrc%5Etfw%7Ctwcamp%5Etweetembed%7Ctwterm%5E1831686533511819561%7Ctwgr%5Eb5e7cced89942819c1e2ca9781cf70f286ae1fa0%7Ctwcon%5Es1_&ref_url=https%3A%2F%2Ftv9kannada.com%2Fnational%2Fandhra-pradesh-cm-chandrababu-naidu-narrowly-escapes-train-accident-on-flood-hit-vijayawada-visit-sct-897253.html

ವಿಜಯವಾಡದಲ್ಲಿ ಭಾನುವಾರವೊಂದರಲ್ಲೇ 37 ಸೆಂ.ಮೀ ಮಳೆ ಸುರಿದಿದ್ದು, ಬುಡಮೇರು ನದಿ ಉಕ್ಕಿ ಹರಿಯಲು ಕಾರಣವಾಗಿದೆ. ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ಹುಟ್ಟುವ ಈ ನದಿಯು ಒಡ್ಡು ಒಡೆದು ಭಾರಿ ಪ್ರವಾಹಕ್ಕೆ ಕಾರಣವಾಗಿದೆ. ಇದರಿಂದ ರಕ್ಷಣಾ ತಂಡಗಳಿಗೆ ಜನರನ್ನು ತಲುಪಲು ಕಷ್ಟವಾಗುತ್ತಿದೆ.

 

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!