3 ಅಂತಸ್ತಿನ ಕಟ್ಟಡ ಕುಸಿತ: ಓರ್ವ ಮೃತ್ಯು, 13 ಮಂದಿಗೆ ಗಾಯ, ಹಲವರು ಸಿಲುಕಿರುವ ಶಂಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲಕ್ನೋದ ಟ್ರಾನ್ಸ್‌ಪೋರ್ಟ್ ನಗರ ಪ್ರದೇಶದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದು ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಸುಮಾರು 10 ಜನರು ಸಿಲುಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಅಧಿಕಾರಿಗಳ ಪ್ರಕಾರ, ಕಟ್ಟಡ ಕುಸಿದು ಬಿದ್ದಾಗ ನೆಲಮಾಳಿಗೆಯಲ್ಲಿ ಕೆಲಸ ನಡೆಯುತ್ತಿತ್ತು. ಘಟನೆಯಲ್ಲಿ ಸುಮಾರು 13 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಹರ್ಮಿಲಾಪ್ ಬಿಲ್ಡಿಂಗ್ ಎಂದು ಕರೆಯಲ್ಪಡುವ ಈ ಕಟ್ಟಡವನ್ನು ಔಷಧ ಗೋದಾಮಿನಂತೆ ಬಳಸಲಾಗುತ್ತಿತ್ತು. ಸಂಜೆ 5 ಗಂಟೆ ಸುಮಾರಿಗೆ ಘಟನೆ ಸಂಭವಿಸಿದೆ.

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳದವರು ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆಯ ತಂಡಗಳು ಸ್ಥಳದಲ್ಲಿವೆ.

NDRF ಮತ್ತು SDRF ತಂಡಗಳು ಸಿಲುಕಿರುವ ಜನರನ್ನು ರಕ್ಷಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ ಎಂದು ರಿಲೀಫ್ ಕಮಿಷನರ್ ಜಿಎಸ್ ನವೀನ್ ಕುಮಾರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!