ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗಷ್ಟೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾರತದ ಮಧ್ಯಸ್ಥಿಕೆಯಲ್ಲಿ ಶಾಂತಿ ಒಪ್ಪಂದದ ಬಗ್ಗೆ ಮಾತನಾಡಿದ್ದರು. ಅದರ ನಂತರ, ಉಕ್ರೇನ್ ರಷ್ಯಾದ ವಿರುದ್ಧ ಹೊಸ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಉಕ್ರೇನ್ ರಷ್ಯಾದ ಮಿಲಿಟರಿ ನೆಲೆಯಲ್ಲಿ “ಡ್ರ್ಯಾಗನ್ ಡ್ರೋನ್” ಎಂಬ ಹೊಸ ರೀತಿಯ ಶಸ್ತ್ರಾಸ್ತ್ರವನ್ನು ಪರೀಕ್ಷಿಸಿದೆ ಎಂದು ವರದಿಯಾಗಿದೆ.
ಆಕ್ರಮಿತ ಖಾರ್ಕಿವ್ ಪ್ರದೇಶದಲ್ಲಿ ರಷ್ಯಾದ ಸ್ಥಾನಗಳ ಮೇಲೆ ಡ್ರ್ಯಾಗನ್ ಡ್ರೋನ್ ಎಂಬ ಬೆಂಕಿ ಉಗುಳುವ ಅಸ್ತ್ರವನ್ನು ಪ್ರಯೋಗಿಸಿದೆ. ಈ ಅಸ್ತ್ರದ ಬಳಕೆಯ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಕಾಡಿನಲ್ಲಿ ರಷ್ಯಾದ ಸೈನಿಕರ ವಿರುದ್ಧ ಈ ಅಸ್ತ್ರವನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ವರದಿಗಳ ಪ್ರಕಾರ, ಮರಗಳು ಮಾತ್ರವಲ್ಲದೆ ಅನೇಕ ರಷ್ಯಾದ ಸೈನಿಕರು ಸಹ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.