ಹೊಸದಿಗಂತ ಡಿಜಿಟಲ್ ಡೆಸ್ಕ್:
ಜನಪ್ರಿಯ ವಾಟ್ಸ್ಆ್ಯಪ್ನಲ್ಲಿ ಹೊಸ ಫೀಚರನ್ನು ತರಲು ಮೆಟಾ ಮುಂದಾಗಿದೆ. ಅದೇನೆಂದರೆ ವಾಟ್ಸ್ಆ್ಯಪ್ನಲ್ಲಿ ಕ್ಯಾಮೆರಾ ಫಿಲ್ಟರ್ ತರಲು ಯೋಜಿಸಿದೆ.
ಬಹುತೇಕರು ವಾಟ್ಸ್ಆ್ಯಪ್ನಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಕ್ಕಿಸಿ ಸ್ಟೇಟಸ್ ಹಂಚಿಕೊಳ್ಳುತ್ತಾರೆ. ಇದನ್ನು ಗಮನಿಸಿದ ವಾಟ್ಸ್ಆ್ಯಪ್ ಫೋಟೋ ಮತ್ತು ವಿಡಿಯೋ ಫಿಲ್ಟರ್ ತರಲು ಚಿಂತಿಸಿದೆ. ಇನ್ಸ್ಟಾಗ್ರಾಂನಂತೆಯೇ ಫಿಲ್ಟರ್ ಬಳಕೆಗೆ ಬರಲಿದೆ.
ವಾಬೇಟಾಇನ್ಫೋ ಪ್ರಕಾರ, ವಾಟ್ಸ್ಆ್ಯಪ್ ಕ್ಯಾಮೆರಾದಲ್ಲಿ ಫಿಲ್ಟರ್ ಅಳವಡಿಸುವ ಮೂಲಕ ಕೆಲವೊಂದು ಬದಲಾವಣೆ ತರಲಿದೆ. ಈ ಫಿಲ್ಟರ್ಗಳು ಬೆಳಕನ್ನು ಸರಿಹೊಂದಿಸಲು, ಫೋಟೋ ಮತ್ತು ವಿಡಿಯೋ ಚಂದಗಾಣಿಸಲು ಪ್ರಯೋಜನಕಾರಿಯಾಗಿದೆ.
ವಾಟ್ಸ್ಆ್ಯಪ್ ಬಳಕೆದಾರರು ಈ ಫಿಲ್ಟರ್ ಅನ್ನು ಟ್ಯಾಪ್ ಮಾಡುವ ಮೂಲಕ ಅಳವಡಿಸಬಹುದಾಗಿದೆ. ಸದ್ಯ ಈ ಫೀಚರ್ ಬೀಟಾ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.