ಹುಬ್ಬಳ್ಳಿಯಲ್ಲಿಯೊಂದು ಗಾಡಿ ಕಳ್ಳರ ಗ್ಯಾಂಗ್‌ ಅರೆಸ್ಟ್‌: ಪಬ್ಲಿಕ್‌ ಪ್ಲೇಸ್‌ನಲ್ಲಿ ನಿಲ್ಲಿಸಿದ್ದ ವಾಹನಗಳೇ ಟಾರ್ಗೆಟ್‌!

ಹೊಸದಿಗಂತ ವರದಿ ಹುಬ್ಬಳ್ಳಿ:

ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕಳುವು ಮಾಡುತ್ತಿದ್ದ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ವಿದ್ಯಾನಗರ ಪೊಲೀಸರು ಬಂಧಿಸಿ ಅವರಿಂದ ೬.೪೦ ಲಕ್ಷ ರೂ. ಮೌಲ್ಯದ ೧೨ ದ್ವಿಚಕ್ರ ವಾಹನಗಳ ವಶಕ್ಕೆ ಪಡಿದಿದ್ದಾರೆ.

ಕೇಶ್ವಾಪುರದ ರೇಷ್ಮಾ ಗುಡಗೇರಿ, ರಾಮನಗರ ರವಿ ಬಣಸೋಡೆ, ಗದಗ ರಸ್ತೆ ಆಸ್ಮಾ ಬಾನು ಬಾಗವಾನ, ಮುಬಾರಕ್ ಬಾಗವಾನ್, ಕೆ.ಕೆ. ನಗರದ ದಸ್ತಗಿರ ಧಾರವಾಡ ಬಂಧಿತರು.

ದ್ವಿಚಕ್ರ ವಾಹನ ಕಳವು ಪ್ರಕರಣ ಮುಖ್ಯ ಆರೋಪಿ ಆಸ್ಮಾಬಾನು ಹಾಗೂ ಮುಬಾರಕ್ ರೈಲ್ವೆ ಉದ್ಯೋಗಿಗಳಾಗಿದ್ದಾರೆ. ಬಂಧಿತರಿಂದ ವಿದ್ಯಾನಗರ ಪೊಲೀಸ್ ಠಾಣೆ ವ್ಯಾಪ್ತಿ ಏಳು ದ್ವಿಚಕ್ರ ವಾಹನ, ಕೇಶ್ವಾಪುರ ೩, ಹುಬ್ಬಳ್ಳಿ ಉಪನಗರ ಹಾಗೂ ಧಾರವಾಡ ಶಹರ ಠಾಣೆ ವ್ಯಾಪ್ತಿ ತಲಾ ೧ ಪ್ರಕರಣಗಳು ದಾಖಲಾಗಿವೆ.

ಆರೋಪಿ ರೇಷ್ಮಾ ಕಿಮ್ಸ್ ಹಾಗೂ ಜನನಿಬಿಡ ಪ್ರದೇಶಗಳಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ನಕಲಿ ಕೀ ಬಳಿಸಿ ಕಳವು ಮಾಡುತ್ತಿದ್ದಳು. ಕದ್ದ ವಾಹನಗಳನ್ನು ಜನರಿಗೆ ಅಡಚಣೆ ಹೆಸರಿನಲ್ಲಿ ಆಸ್ಮಾಬಾನು ಹಾಗೂ ಮುಬಾರಕ್ ನಕಲಿ ನಂಬರ್ ಫಲಕಗಳ ಬಳಸಿ, ದಾಖಲಾತಿಗಳಲಿಲ್ಲದೆ ಜನರಿಗೆ ಮಾರಾಟ ಮಾಡುತ್ತಿದ್ದರು. ಆರೋಪಿಗಳಾದ ರವಿ ಹಾಗೂ ರೇಷ್ಮಾ ಇಬ್ಬರನ್ನು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಆಧರಿಸಿ ಕಿಮ್ಸ್ ಹಿಂಭಾಗದಲ್ಲಿ ಬಂಧಿಸಿದ್ದಾರೆ. ಬಳಿಕ ಇವರಿಬ್ಬರ ವಿಚಾರಣೆ ನಡೆಸಿದಾಗ ಪ್ರಕರಣದಲ್ಲಿ ಇನ್ನೂ ಮೂವರು ಇರುವುದನ್ನು ಬಾಯಿ ಬಿಟ್ಟಿದ್ದಾರೆ. ಬಳಿಕ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವಿದ್ಯಾನಗರದ ಪೊಲೀಸ್ ಠಾಣೆಯ ಅಧಿಕಾರಿ ಜಯಂತ ಗೌಳಿ, ಪಿಎಸ್ಐಗಳಾದ ಭೀಮಣ್ಣ ಸಾತಣ್ಣವರ, ಶ್ರೀಮಂತ ಹುಣಸಿಕಟ್ಟಿ ಹಾಗೂ ಸಿಬ್ಬಂದಿಗಳಾದ ಪರಶುರಾಮ ಹಿರಗಣ್ಣವರ, ಶಿವಾನಂದ ತಿರಕಣ್ಣವರ, ಮಲ್ಲಿಕಾರ್ಜುನ ಧನಗೊಂಡ, ಸೈಯದ‌ಅಲಿ ತಹಸೀಲ್ದಾರ, ರಾಜು ಗುಂಜಾಳ, ಮಂಜು ಏಣಗಿ, ಪ್ರಕಾಶ ಠಕ್ಕಣ್ಣವರ, ಅಕ್ಕಮಹಾದೇವಿ ಹರೀಶೆಟ್ಟಿ ಕಾರ್ಯಾಚರಣೆಯಲ್ಲಿ ಇದ್ದರು.

- Advertisement - Skool Shine
Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!