ವಾಟ್ಸಾಪ್‌ನಲ್ಲಿ ಬರಲಿದೆ ಹೊಸ ಫೀಚರ್‌, ಇನ್ಸ್ಟಾ ಥರ ಇಲ್ಲೂ ಸಿಗಲಿದೆ ವಿಭಿನ್ನ ಫಿಲ್ಟರ್ಸ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಜನಪ್ರಿಯ ವಾಟ್ಸ್​ಆ್ಯಪ್​ನಲ್ಲಿ ಹೊಸ ಫೀಚರನ್ನು ತರಲು ಮೆಟಾ ಮುಂದಾಗಿದೆ. ಅದೇನೆಂದರೆ ವಾಟ್ಸ್​ಆ್ಯಪ್​ನಲ್ಲಿ ಕ್ಯಾಮೆರಾ ಫಿಲ್ಟರ್​​ ತರಲು ಯೋಜಿಸಿದೆ.

ಬಹುತೇಕರು ವಾಟ್ಸ್​ಆ್ಯಪ್​ನಲ್ಲಿ ಫೋಟೋ ಮತ್ತು ವಿಡಿಯೋ ಕ್ಲಿಕ್ಕಿಸಿ ಸ್ಟೇಟಸ್​ ಹಂಚಿಕೊಳ್ಳುತ್ತಾರೆ. ಇದನ್ನು ಗಮನಿಸಿದ ವಾಟ್ಸ್​ಆ್ಯಪ್​ ಫೋಟೋ ಮತ್ತು ವಿಡಿಯೋ ಫಿಲ್ಟರ್​ ತರಲು ಚಿಂತಿಸಿದೆ. ಇನ್​​ಸ್ಟಾಗ್ರಾಂನಂತೆಯೇ ಫಿಲ್ಟರ್ ಬಳಕೆಗೆ ಬರಲಿದೆ.

ವಾಬೇಟಾಇನ್ಫೋ ಪ್ರಕಾರ, ವಾಟ್ಸ್​ಆ್ಯಪ್​ ಕ್ಯಾಮೆರಾದಲ್ಲಿ ಫಿಲ್ಟರ್​ ಅಳವಡಿಸುವ ಮೂಲಕ ಕೆಲವೊಂದು ಬದಲಾವಣೆ ತರಲಿದೆ. ಈ ಫಿಲ್ಟರ್​ಗಳು ಬೆಳಕನ್ನು ಸರಿಹೊಂದಿಸಲು, ಫೋಟೋ ಮತ್ತು ವಿಡಿಯೋ ಚಂದಗಾಣಿಸಲು ಪ್ರಯೋಜನಕಾರಿಯಾಗಿದೆ.

ವಾಟ್ಸ್​ಆ್ಯಪ್​ ಬಳಕೆದಾರರು ಈ ಫಿಲ್ಟರ್​ ಅನ್ನು ಟ್ಯಾಪ್​ ಮಾಡುವ ಮೂಲಕ ಅಳವಡಿಸಬಹುದಾಗಿದೆ. ಸದ್ಯ ಈ ಫೀಚರ್​ ಬೀಟಾ ಹಂತದಲ್ಲಿದ್ದು, ಸದ್ಯದಲ್ಲೇ ಬಳಕೆದಾರರಿಗೆ ಸಿಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!