ಹೊಸದಿಗಂತ ಡಿಜಿಟಲ್ ಡೆಸ್ಕ್;
ಅಕ್ಟೋಬರ್ 22 ಮತ್ತು ಅಕ್ಟೋಬರ್ 24ರಂದು ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು, ಹೀಗಾಗಿ ಬ್ರಿಕ್ಸ್ ಸದಸ್ಯತ್ವಕ್ಕಾಗಿ 34 ದೇಶಗಳು ಅಧಿಕೃತವಾಗಿ ಅರ್ಜಿ ಸಲ್ಲಿಸಿದೆ .
ಕಜಾನ್‌ನಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ 10 ಹೊಸ ಸದಸ್ಯರು ಮತ್ತು 10 ಪಾಲುದಾರರನ್ನು ಘೋಷಿಸಲಾಗುತ್ತದೆ.
ಸಂಘರ್ಷ ಪೀಡಿತ ರಾಷ್ಟ್ರಗಳಾದ ಪ್ಯಾಲೆಸ್ತೀನ್, ಸಿರಿಯಾ ಮತ್ತು ಮ್ಯಾನ್ಮಾರ್ ಕೂಡ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು ಒಮ್ಮತದ ಅಭಿಪ್ರಾಯ ನಂತರ ಘೋಷಣೆ ಮಾಡಲಾಗುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರು ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು, ಮೂರು ತಿಂಗಳ ಅವಧಿಯಲ್ಲಿ ರಷ್ಯಾಕ್ಕೆ ಅವರ ಎರಡನೇ ಭೇಟಿಯಾಗಲಿದೆ. ಮೋದಿ ಇತರ ಸದಸ್ಯರ ನಾಯಕರೊಂದಿಗೆ ದ್ವಿಪಕ್ಷೀಯ ಸಭೆಗಳನ್ನು ನಡೆಸುವ ಸಾಧ್ಯತೆಯಿದೆ. ಪ್ರಸ್ತುತ, ಟರ್ಕಿ ಮತ್ತು ಥೈಲ್ಯಾಂಡ್ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದವು.
ಹೊಸ ಸದಸ್ಯರಾಗಿ ಪರಿಗಣಿಸಲು ಸುಮಾರು 34 ದೇಶಗಳ ಜೊತೆ ಬ್ರಿಕ್ಸ್ ಚರ್ಚೆ ನಡೆಸಿವೆ. ಇವುಗಳಲ್ಲಿ ಅಲ್ಜೀರಿಯಾ, ಅಜೆರ್ಬೈಜಾನ್, ಬಹ್ರೇನ್, ಬಾಂಗ್ಲಾದೇಶ, ಬೆಲಾರಸ್, ಬೊಲಿವಿಯಾ, ಕ್ಯೂಬಾ, ಚಾಡ್, ರಿಪಬ್ಲಿಕ್ ಆಫ್ ಕಾಂಗೋ, ಈಕ್ವಟೋರಿಯಲ್ ಗಿನಿಯಾ, ಎರಿಟ್ರಿಯಾ, ಹೊಂಡುರಾಸ್, ಇಂಡೋನೇಷಿಯಾ, ಕಝಾಕಿಸ್ತಾನ್ ಸೇರಿವೆ. ಕುವೈತ್, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಮೊರಾಕೊ, ನಿಕರಾಗುವಾ, ನೈಜೀರಿಯಾ, ಪಾಕಿಸ್ತಾನ, ಸೆನೆಗಲ್, ದಕ್ಷಿಣ ಸುಡಾನ್, ಶ್ರೀಲಂಕಾ, ಪ್ಯಾಲೆಸ್ಟೈನ್ ರಾಜ್ಯ, ಸಿರಿಯಾ, ಥೈಲ್ಯಾಂಡ್, ಟರ್ಕಿ, ಉಗಾಂಡಾ, ಉಜ್ಬೇಕಿಸ್ತಾನ್, ವೆನೆಜುವೆಲಾ, ವಿಯೆಟ್ನಾಂ ಮತ್ತು ಜಿಂಬಾಬ್ವೆ ಅರ್ಜಿ ಸಲ್ಲಿಸಿವೆ.
ಬ್ರಿಕ್ಸ್‌ನ ಪ್ರಸ್ತುತ ಹತ್ತು ಸದಸ್ಯ ರಾಷ್ಟ್ರಗಳು ಯಾವುವೆಂದರೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ, ಈಜಿಪ್ಟ್, ಇಥಿಯೋಪಿಯಾ, ಇರಾನ್, ಯುಎಇ ಮತ್ತು ಸೌದಿ ಅರೇಬಿಯಾ.
ಏತನ್ಮಧ್ಯೆ, ಮುಂಬರುವ ಶೃಂಗಸಭೆಯಲ್ಲಿ ಸುಮಾರು 24 ರಾಷ್ಟ್ರಗಳ ನಾಯಕರು ಭಾಗವಹಿಸುವ ಸಾಧ್ಯತೆಯಿದೆ ಎಂದು ಕ್ರೆಮ್ಲಿನ್ ಹೇಳಿದೆ.