January20, 2026
Tuesday, January 20, 2026
spot_img

Viral | ಪ್ರಾಣ ಲೆಕ್ಕಕ್ಕೆ ಇಲ್ಲ: ವೈರಲ್ ಆಗೋದಕ್ಕೆ ಈ ರೀತಿ ಯಾರ್ ಮಾಡ್ತಾರೆ ಸ್ವಾಮೀ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದಿನ ಡಿಜಿಟಲ್ ಯುಗದಲ್ಲಿ ಒಮ್ಮೆಗೆ ವೈರಲ್ ಆಗುವ, ಖ್ಯಾತಿ ಪಡೆಯುವ ಹಂಬಲ ಕೆಲವರನ್ನು ಅತೀ ಅಪಾಯಕಾರಿ ಹಾದಿಗೆ ತಳ್ಳಿಬಿಡುತ್ತೆ. ಲೈಕ್‌ಗಳು ಮತ್ತು ವೀಕ್ಷಣೆಗಳಿಗಾಗಿ ಮಾಡುವ ಈ ಕೃತ್ಯಗಳು ಸ್ವಂತ ಜೀವಕ್ಕೆ ಮಾತ್ರವಲ್ಲ, ಸಾರ್ವಜನಿಕ ಸುರಕ್ಷತೆಗೋ ದೊಡ್ಡ ಅಪಾಯವಾಗುತ್ತಿರುವುದು ಆತಂಕಕಾರಿ ಸಂಗತಿ.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋವೊಂದರಲ್ಲಿ, ಯುವಕನೊಬ್ಬ ಅತಿ ವೇಗದಲ್ಲಿ ಬೈಕ್ ಚಲಾಯಿಸುತ್ತಾ ಸಾಗುತ್ತಿರುವುದು ಕಾಣಿಸುತ್ತದೆ. ರಸ್ತೆ ಮಧ್ಯೆ ಟ್ರಕ್ ಮುಂದೆ ನಿಂತು ಚಾಲಕನೊಂದಿಗೆ ಏನೋ ಮಾತನಾಡಲು ಯತ್ನಿಸಿದ ಬಳಿಕ, ಆತ ಅಚ್ಚರಿಯ ಸಾಹಸಕ್ಕೆ ಕೈಹಾಕಿದ್ದಾನೆ. ಟ್ರಕ್ ಸಾಗುತ್ತಿರುವ ಸಂದರ್ಭದಲ್ಲೇ ಅದರ ಅಡಿಯಲ್ಲಿ ಬೈಕ್ ಓಡಿಸಿರುವ ದೃಶ್ಯಗಳು ವೀಕ್ಷಕರನ್ನು ಬೆಚ್ಚಿಬೀಳುವಂತೆ ಮಾಡಿವೆ.

ಈ ರೀತಿಯ ಕೃತ್ಯಗಳು ಕ್ಷಣಿಕ ಗಮನ ಸೆಳೆಯಬಹುದು, ಆದರೆ ಪರಿಣಾಮಗಳು ಅತ್ಯಂತ ಭೀಕರವಾಗಿರುತ್ತವೆ. ಚಾಲಕನ ಗಮನ ತಪ್ಪಿದರೆ ದೊಡ್ಡ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಜೊತೆಗೆ, ಅದೇ ರಸ್ತೆಯಲ್ಲಿ ಸಂಚರಿಸುವ ಇತರ ವಾಹನ ಚಾಲಕರು ಮತ್ತು ಪಾದಚಾರಿಗಳ ಜೀವಕ್ಕೂ ಇದು ಅಪಾಯ ತಂದೊಡ್ಡುತ್ತದೆ.

ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಪ್ರದರ್ಶಿಸುವುದು ಕಾನೂನುಬಾಹಿರ. ಇದು ಅಜಾಗರೂಕ ವರ್ತನೆ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. ವೈರಲ್ ಆಗುವ ಹವಣಿಕೆಗೆ ಬಲಿಯಾಗಿ ಜೀವವನ್ನು ಪಣಕ್ಕಿಡುವ ಪ್ರವೃತ್ತಿಗೆ ತಿಲಾಂಜಲಿ ಇಡಬೇಕು ಎಂಬ ಅಭಿಪ್ರಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿಬರುತ್ತಿದೆ.

Must Read