ಅಭಿವೃದ್ಧಿಯೇ ನಮ್ಮ ತಂದೆ-ತಾಯಿ, ಗ್ಯಾರಂಟಿಗಳೇ ಬಂಧು ಬಳಗ: ಡಿ.ಕೆ ಶಿವಕುಮಾರ್‌

ಹೊಸದಿಗಂತ ಡಿಜಿಟಲ್ ಡೆಸ್ಕ್: 

ನಮಗೆ ಅಭಿವೃದ್ಧಿಯೇ ತಂದೆ-ತಾಯಿ, ಗ್ಯಾರಂಟಿಗಳೇ ನಮ್ಮ ಬಂಧು ಬಳಗ ಎಂದು ಡಿಸಿಎಂ ಡಿ.ಕೆ ಶಿವಕುಮಾರ್‌ ಹೇಳಿದ್ದಾರೆ.

ಗದಗದ ರೋಣ ಪಟ್ಟಣದ ದ್ರೋಣಾಚಾರ್ಯ ಕ್ರೀಡಾಂಗಣದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈ ವೇಳೆ, ಗ್ಯಾರಂಟಿ ಜಾರಿ ಮಾಡುವ ಮೂಲಕ ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿದ್ದೇವೆ. ಅನ್ನಭಾಗ್ಯದಲ್ಲಿ ದಾಸೋಹ, ಗೃಹಲಕ್ಷ್ಮೀ ಯೋಜನೆಯಲ್ಲಿ ಸಬಲೀಕರಣ, ಗೃಹಜ್ಯೋತಿ ಮೂಲಕ ಸಮಾಜಕ್ಕೆ ಬೆಳಕು, ಶಕ್ತಿ ಯೋಜನೆ ಮೂಲಕ ಮಹಿಳೆಗೆ ಸ್ವಾತಂತ್ರ್ಯ, ಯುವನಿಧಿ ಮೂಲಕ ಕಾಯಕವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ಬಿಜೆಪಿಗರು ಭಾವನೆಗಳ ಜೊತೆ ರಾಜಕಾರಣ ಮಾಡಿದರೆ. ನಾವು ನಮ್ಮ ನಮ್ಮ ಗ್ಯಾರಂಟಿ ಮೂಲಕ ಬಡವರ ಬದುಕಿನಲ್ಲಿ ಬದಲಾವಣೆ ತಂದಿದ್ದೇವೆ. ಜಿ.ಎಸ್. ಪಾಟೀಲ್ ಅವರ ಕುಟುಂಬ ಸೇವಕರ ರೀತಿಯಲ್ಲಿ‌ ಇಲ್ಲಿ ಕೆಲಸ ಮಾಡುತ್ತಿದೆ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!