ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್ ಕುರಿತು ಮೊದಲ ಬಾರಿಗೆ ಕಿಚ್ಚ ಸುದೀಪ್ ಅವರ ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ.
ಸತತ 10 ಸೀಸನ್‌ಗಳಿಂದ ಕನ್ನಡ ಬಿಗ್ ಬಾಸ್ ಅನ್ನ ಕಿಚ್ಚ ಸುದೀಪ್ ಅವರೇ ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಈಗಾಗಲೇ ಕಿಚ್ಚ ಸುದೀಪ್ ಅವರು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ.
ಸದ್ಯ ಕಿಚ್ಚ ಸುದೀಪ್ ಅವರು ತಮ್ಮ ಮ್ಯಾಕ್ಸ್ ಸಿನಿಮಾ ಪ್ರಮೋಷನಲ್‌ನಲ್ಲಿ ಬ್ಯುಸಿ ಆಗಿದ್ದಾರೆ. ಪ್ರೀ ರಿಲೀಸ್ ಇವೆಂಟ್‌ಗೂ ಮುನ್ನ ಕಿಚ್ಚ ಸುದೀಪ್ ಅವರು ಸಂದರ್ಶನ ನೀಡಿದ್ದಾರೆ. ಖಾಸಗಿ ಸಂದರ್ಶನದಲ್ಲಿ ಮಾತನಾಡಿರುವ ಕಿಚ್ಚ ಸುದೀಪ್ ಅವರು ನೇರವಾಗಿ ಕನ್ನಡದ ಬಿಗ್ ಬಾಸ್ ಬಗ್ಗೆ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಕನ್ನಡದ ಬಿಗ್ ಬಾಸ್ ಬಗ್ಗೆ ನನಗೆ ಅನ್ನಿಸಿದ್ದನ್ನು ನಾನು ಹೇಳುತ್ತೇನೆ. ಇನ್ನು ಒಂಚೂರು ಇಂಪ್ರೂಮೆಂಟ್ ಆಗಬೇಕಿದೆ. ಹಿಂದಿ, ತೆಲುಗು, ತಮಿಳು ಹೀಗೆ ಬೇರೆ ಭಾಷೆಯ ಬಿಗ್ ಬಾಸ್ ಶೋಗಳನ್ನ ಅಕ್ಕ-ಪಕ್ಕದಲ್ಲಿ ಇಟ್ಟು ನೋಡಿದಾಗ ಕನ್ನಡದ ಬಿಗ್ ಬಾಸ್‌ನಲ್ಲಿ ಸ್ವಲ್ಪ ಕೊರತೆ ಕಾಣಿಸುತ್ತಿದೆ ಎಂದಿದ್ದಾರೆ.
ಬಿಗ್ ಬಾಸ್ ವೀಕ್ಷಕರು, ಟಿಆರ್‌ಪಿ ವಿಚಾರದಲ್ಲಿ ನಾನು ಹೇಳುತ್ತಿಲ್ಲ. ಬಿಗ್ ಬಾಸ್ ತಂಡದಲ್ಲಿ ಯಾರ್ ಯಾರಿದ್ದಾರೋ ಅವರು ಸ್ವಲ್ಪ ಬೇರೆ ರೀತಿಯಲ್ಲಿ ಆಲೋಚನೆ ಮಾಡಬೇಕು ಅಂತ ನನಗೆ ಅನ್ನಿಸುತ್ತಾ ಇದೆ. ಕನ್ನಡದ ಬಿಗ್ ಬಾಸ್ ಇನ್ನೂ ಚೆನ್ನಾಗಿ ಆಗಬೇಕು ಅನ್ನೋದು ನನ್ನ ಅಭಿಪ್ರಾಯ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಕಳೆದ ಅಕ್ಟೋಬರ್ 13ರಂದು ಕಿಚ್ಚ ಸುದೀಪ್ ಅವರು ಸೋಷಿಯಲ್ ಮೀಡಿಯಾ X ನಲ್ಲಿ ಟ್ವೀಟ್ ಮಾಡಿ ಬಿಗ್ಬಾಸ್ 11ನೇ ಸೀಸನ್ ನನ್ನ ಕೊನೆಯ ಸೀಸನ್ ಆಗಿರುತ್ತದೆ ಎಂದು ಹೇಳಿದ್ದರು.