ಕುವೈತ್​ನಲ್ಲಿ ನನ್ನ ಅಜ್ಜನನ್ನು ಭೇಟಿ ಮಾಡ್ತೀರಾ ಎಂದು ಕೇಳಿದ ಮೊಮ್ಮಗ: ಕೊಟ್ಟ ಮಾತು ಉಳಿಸಿಕೊಂಡ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಕುವೈತ್‌ಗೆ ಎರಡು ದಿನಗಳ ಪ್ರವಾಸ ಕೈಗೊಂಡಿದ್ದು, ಅಲ್ಲಿ ದೇಶದ ಉನ್ನತ ನಾಯಕರನ್ನು ಭೇಟಿಯಾಗಲಿದ್ದಾರೆ. 43 ವರ್ಷಗಳ ಬಳಿಕ ಭಾರತದ ಪ್ರಧಾನಿಯೊಬ್ಬರು ಕುವೈತ್‌ಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಈ ನಡುವೆ ಪ್ರಧಾನಿ, 101 ವರ್ಷ ಮಾಜಿ ಐಎಫ್‌ಎಸ್‌ ಅಧಿಕಾರಿಯೊಬ್ಬರನ್ನು ಭೇಟಿಯಾಗಿದ್ದಾರೆ.

ಮಾಜಿ ಐಎಫ್‌ಎಸ್‌ ಅಧಿಕಾರಿ ಮಂಗಲ್‌ ಸೈನ್‌ ಹಂದಾ ಅವರ ಮೊಮ್ಮಗಳು ಶ್ರೇಯಾ ಜುನೇಜಾ ಅವರು ಎಕ್ಸ್‌ನಲ್ಲಿ ನನ್ನ ಅಜ್ಜ ಮಾಜಿ ಐಎಎಫ್ ಅಧಿಕಾರಿಯಾಗಿದ್ದು, ನಿಮ್ಮನ್ನು ಕಾಣಬೇಕೆಂದು ಬಯಸಿದ್ದಾರೆ. ಅವರು ನಿಮ್ಮ ಅಭಿಮಾನಿಯಾಗಿದ್ದಾರೆ, ನಾಳೆ ಅನಿವಾಸಿ ಭಾರತೀಯರೊಂದಿದೆ ನಡೆಯುವ ಸಂವಾದದಲ್ಲಿ ನೀವು ಅವರೊಂದಿಗೆ ಮಾತನಾಡಬಹುದೇ ಎಂದು ವಿನಂತಿಸಿಕೊಂಡಿದ್ದರು.

ಇದಕ್ಕೆ ಸ್ಪಂದಿಸಿದ ಪ್ರಧಾನಿ ಮೋದಿ ಖಂಡಿತವಾಗಿಯೂ, ನಾನು ಇಂದು ಕುವೈತ್‌ನಲ್ಲಿ ಮಂಗಲ್‌ ಸೈನ್‌ ಹಂದಾ ಅವರನ್ನು ಭೇಟಿಯಾಗಲು ಎದುರು ನೋಡುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದಾರೆ. ಅದರಂತೆಕೊಟ್ಟ ಮಾತಿನಂತೆ ಮೋದಿ ಅವರು ಗಲ್ಫ್ ರಾಷ್ಟ್ರಕ್ಕೆ ಆಗಮಿಸಿದ ನಂತರ 101 ವರ್ಷದ ಐಎಎಫ್ ಅಧಿಕಾರಿಯನ್ನು ಭೇಟಿಯಾಗಿದ್ದಾರೆ.

ಮಂಗಲ್ ಸೈನ್ ಹಂದಾ ಅವರು ಪ್ರಧಾನಿ ಮೋದಿಯವರ ಬಹುಕಾಲದ ಅಭಿಮಾನಿಯಾಗಿದ್ದಾರೆ. 2023ರಲ್ಲಿ, ಹಂಡಾ ಅವರ 100ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪ್ರಧಾನಿಯವರಿಂದ ವೈಯಕ್ತಿಕ ಪತ್ರವನ್ನು ಸ್ವೀಕರಿಸಿದ್ದರು. ಪತ್ರದಲ್ಲಿ ಮೋದಿ ಅವರು ಭಾರತದ ರಾಜತಾಂತ್ರಿಕ ಪ್ರಯತ್ನಗಳಿಗೆ ಹಂದಾ ಅವರ ಕೊಡುಗೆಗಳನ್ನು ಶ್ಲಾಘಿಸಿದ್ದರು ಮತ್ತು ಅವರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಹಾರ್ದಿಕ ಶುಭಾಶಯಗಳನ್ನು ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!