October 8, 2026
Thursday, October 8, 2026
spot_img

ಮನೆ ಹಂಚಿಕೆ ಸಮಾರಂಭ: ಪೋಸ್ಟರ್ ಕಟೌಟ್ ಕುಸಿದು ಬಿದ್ದು ನಾಲ್ವರಿಗೆ ಗಾಯ

ಹೊಸದಿಗಂತ ವರದಿ ಹುಬ್ಬಳ್ಳಿ:

ಹುಬ್ಬಳ್ಳಿಯ ಮಂಟೂರ ರಸ್ತೆಯಲ್ಲಿ ಕೋಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ವಸತಿ ಇಲಾಖೆಯಿಂದ ಏರ್ಪಡಿಸಿದ ಮನೆಗಳ ಹಂಚಿಕೆ ಸಮಾರಂಭ ಕೊನೆಯ ಹಂತ ಸಿದ್ಧತೆ ವೇಳೆ ಕಟೌಟ್ ನಿರ್ಮಿಸುವಾಗ ಅವಘಡವಾಗಿ ಮೂರು, ನಾಲ್ಕು ಜನರು ಗಾಯಗೊಂಡಿರುವ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ.

ಜನಪತ್ರಿನಿಧಿಗಳ ಬೃಹತ್ ಗಾತ್ರ ಚಿತ್ರಗಳನ್ನು ಅಳವಡಿಸುವ ವೇಳೆ ಘಟನೆ ನಡೆದಿದೆ. ಗಾಯಗೊಂಡವರನ್ನು ನಗರದ ಕೆಎಂಸಿಆರ್ ಐ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬೆಂಡಿಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಹಲವು ಸಚಿವರು ಭಾಗವಹಿಸುತ್ತಿದ್ದಾರೆ.

Must Read