ಏರ್​ ಶೋಗಾಗಿ ಬಿಎಂಟಿಸಿಯಿಂದ ಸ್ಪೇಷಲ್ ಸರ್ವಿಸ್: ಪಾಸ್​ ಇದ್ದವರಿಗೆ ಉಚಿತ ಪ್ರಯಾಣ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏರ್​ಶೋಗಾಗಿ ತೆರಳಲು ಇಚ್ಚಿಸುವ ಜನರಿಗೆ ಬಿಎಂಟಿಸಿ ಸ್ಪೇಷಲ್ ಸರ್ವಿಸ್​ ನೀಡುತ್ತಿದೆ. ನಗರದ ಪ್ರಮುಖ ಬಸ್​ಸ್ಟ್ಯಾಂಡ್​ಗಳಿಂದ ಏರ್​ಶೋಗೆ ಡೈರೆಕ್ಟ್ ಬಸ್​ ಸೇವೆ ನೀಡಲಾಗುತ್ತಿದೆ. ಜೊತೆಗೆ ಏರ್​ಶೋ ಪಾಸ್ ಇದ್ದವರಿಗೆ ಉಚಿತ ಪ್ರಯಾಣದ ಸೌಲಭ್ಯವನ್ನು ಕಲ್ಪಿಸಿಕೊಡಲಾಗುತ್ತಿದೆ.

ನಾಲ್ಕು ದಿನಗಳ ಕಾಲ ಈ ಸೌಲಭ್ಯವಿದ್ದು. ಏರ್​ಶೋ ಟಿಕೆಟ್​ ತೋರಿಸಿ ಫ್ರೀಯಾಗಿ ಪ್ರಯಾಣ ಮಾಡಬಹುದು.

ಬ್ರವರಿ 11 ರಿಂದ 14ರವರೆಗೂ ಫ್ರೀ ಬಸ್ ಸೇವೆ ಇದೆ. ಹೆಬ್ಬಾಳ ಕೋರಮಂಗಲ, ಮೆಜೆಸ್ಟಿಕ್, ಶಿವಾಜಿನಗರ, ಬನಶಂಖರಿ, ವಿಜಯನಗರ, ಕೆಂಗೇರಿ, ಒರಿಯಾನ್ ಮಾಲ್​, ಎಲೆಕ್ಟ್ರಾನಿಕ್ ಸಿಟಿ, ಐಟಪಿಎಲ್​ನಿಂದ ಏರ್​ಶೋಗೆ ಬಸ್​ ವ್ಯವಸ್ಥೆ ಮಾಡಲಾಗಿದೆ. ಬಿಎಂಟಿಸಿಯಿಂದಲೇ ಉಚಿತ ಬಸ್​ ಪ್ರಯಾಣ ವ್ಯವಸ್ಥೆ ಮಾಡಲಾಗಿದ್ದು. ಇದನ್ನು ಸದುಪಯೋಗಪಡಿಸಿಕೊಳ್ಳಲು ಬಿಎಂಟಿಸಿ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!