ವಯಸ್ಸಾದ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಹಾಕುಂಭಕ್ಕೆ ಹೋದ ಮಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ವೃದ್ಧ ತಾಯಿಯನ್ನು ಮನೆಯಲ್ಲಿ ಕೂಡಿ ಹಾಕಿ ಮಗನೊಬ್ಬ ಮಹಾಕುಂಭ ಮೇಳಕ್ಕೆ ಹೋದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

ಜಾರ್ಖಂಡದ ರಾಮಗಢದ ಮನೆಯೊಂದರಲ್ಲಿ ಬಂಧಿಯಾಗಿದ್ದ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಮಹಿಳೆಯನ್ನು ಆಕೆಯ ಮಗ ಮನೆಯೊಳಗೆ ಬಂಧಿಯಾಗಿಸಿ, ನಂತರ ಮಹಾ ಕುಂಭ ಮೇಳದಲ್ಲಿ ಭಾಗವಹಿಸಲು ತನ್ನ ಪತ್ನಿ ಹಾಗೂ ಮಕ್ಕಳೊಂದಿಗೆ ಪ್ರಯಾಗ್​ರಾಜ್​ಗೆ ಹೋಗಿದ್ದ.

ಮೂರು ದಿನಗಳ ಕಾಲ ಆ ವೃದ್ಧೆ ಅನ್ನ, ನೀರಿಲ್ಲದೆ ಸಂಕಟಪಟ್ಟಿದ್ದಾರೆ, ಹಸಿವು ಹಾಗೂ ಸಂಕಟದ ಕೂಗು ಅಕ್ಕಪಕ್ಕದ ಮನೆಯವರಿಗೆ ಕೇಳಿಸಿತ್ತು. ಅವು ಮನೆಯ ಬಾಗಿಲು ಒಡೆದು ಒಳಗೆ ನೋಡಿ ದಿಗ್ಭ್ರಮೆಗೊಂಡಿದ್ದಾರೆ. ಹಸಿವಿನಿಂದ ಕಂಗೆಟ್ಟಿದ್ದ ಮಹಿಳೆ ಪ್ಲಾಸ್ಟಿಕ್ ತಿನ್ನಲು ಪ್ರಯತ್ನಿಸುತ್ತಿದ್ದರು. ಕೂಡಲೇ ಜನರು ಅವರಿಗೆ ಆಹಾರ ತಂದುಕೊಟ್ಟರು.

ಆ ಮಹಿಳೆ ಮಗನನ್ನು ಅಖಿಲೇಶ್ ಪ್ರಜಾಪತಿ ಎಂದು ಗುರುತಿಸಲಾಗಿದೆ. ಸೋಮವಾರ ತನ್ನ ಕುಟುಂಬದವರೊಂದಿಗೆ ಕುಂಭಮೇಳಕ್ಕೆ ಹೊರಟಿದ್ದ, ತಾಯಿ ಸಂಜು ದೇವಿಯನ್ನು ಮನೆಯೊಳಗೆ ಕೂಡಿ ಹಾಕಿದ್ದ. ಆಕೆ ಹತಾಶಳಾಗಿದ್ದಳು, ಆಕೆಯ ಕೂಗು ಕೇಳಿ ಸ್ಥಳೀಯರು ಅನಿವಾರ್ಯವಾಗಿ ಬಾಗಿಲು ಒಡೆಯಬೇಕಾಯಿತು. ಬಳಿಕ ಆಕೆಯ ಮಗಳು ಚಾಂದಿನಿ ದೇವಿಗೆ ಮಾಹಿತಿ ನೀಡಲಾಗಿದೆ.

ಚಾಂದನಿ ದೇವಿ, ಅವರ ಚಿಕ್ಕಪ್ಪ ಮಾನಸ ಮಹತೋ ಅವರೊಂದಿಗೆ ಸ್ಥಳಕ್ಕೆ ಧಾವಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಅವರು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಮಗನನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಅಖಿಲೇಶ್ ಪ್ರಜಾಪತಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡರು, ಸೋಮವಾರ ಬೆಳಿಗ್ಗೆ 11 ಗಂಟೆಗೆ ನಾನು ಮತ್ತು ನನ್ನ ಕುಟುಂಬವು ನನ್ನ ತಾಯಿಗೆ ಅಕ್ಕಿ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಿದ ನಂತರ ಮನೆಯಿಂದ ಹೊರಟಿದ್ದೆವು ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here