ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬೇಸಿಗೆ ಬೇಗನೇ ಆರಂಭವಾಗಿದ್ದು, ಸುಡು ಬಿಸಿಲು ತಾಳಲಾರದೆ ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದು, ನೈಸರ್ಗಿಕ ಪಾನೀಯ ಎಳನೀರಿನ ಬೆಲೆ ಕೇಳಿ ಬೆಚ್ಚಿಬೀಳುವಂತಾಗಿದೆ. ಎಲ್ಲ ಆರ್ಟಿಫಿಶಿಯಲ್ ಡ್ರಿಂಕ್‌ಗಳಿಗಿನ್ನ ಎಳನೀರು ಬೆಸ್ಟ್ ಅನ್ನೋ ವಿಚಾರ ಎಲ್ಲರಿಗೂ ಗೊತ್ತಿರುವಂಥದ್ದೇ. ಇದೀಗ ಎಳನೀರಿಗೆ ಡಿಮ್ಯಾಂಡ್ ಹೆಚ್ಚಿದ್ದು, ಅದಕ್ಕೆ ತಕ್ಕಂತೆ ಬೆಲೆ ಕೂಡ ಹೆಚ್ಚಾಗಿದೆ.
ಎಳನೀರಿನ ಬೆಲೆ ಹೆಚ್ಚಾಗಿರುವುದರಿಂದ ಅನೇಕ ರೈತರು ಲಾಭ ಗಳಿಸಲು ತೆಂಗಿನಕಾಯಿಗಳನ್ನು ಕೊಯ್ಲು ಮಾಡಿ ಇತರ ರಾಜ್ಯಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಏರುತ್ತಿರುವ ತಾಪಮಾನದಿಂದಾಗಿ ಎಳನೀರು ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಬೇಸಿಗೆಯಲ್ಲಿ ಅದು ಪ್ರತಿ ಎಳನೀರಿಗೆ 70 ರೂಪಾಯಿಗಳಿಗಿಂತ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಎಳನೀರಿನ ಬೆಲೆ ರಾಜಧಾನಿ ಬೆಂಗಳೂರಿನಲ್ಲಿ 50-60 ರೂಪಾಯಿಯಷ್ಟು ಇದೆ. ಇದು ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ.
ಈ ಬೇಸಿಗೆಯಲ್ಲಿ ಎಳನೀರು ಸಂಪೂರ್ಣ ಬೇಡಿಕೆಯ ಕಾಲು ಭಾಗದಷ್ಟು ಪೂರೈಕೆ ಮಾಡುವುದು ಸಹ ಸವಾಲಿನ ಕೆಲಸ ಎಂದು ರೈತರು ಹೇಳುತ್ತಿದ್ದಾರೆ, ಬುಧವಾರ, ಸಗಟು ಮಾರುಕಟ್ಟೆಯಲ್ಲಿ ಒಂದು ತೆಂಗಿನಕಾಯಿಯ ಬೆಲೆ 38 ರೂಪಾಯಿಗಳಷ್ಟಿತ್ತು ಎನ್ನಲಾಗಿದೆ.