ಹೊಸದಿಗಂತ ಡಿಜಿಟಲ್ ಡೆಸ್ಕ್;
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪಿ ಪವಿತ್ರಾ ಗೌಡಗೆ ದೆಹಲಿ, ಮುಂಬೈಗೆ ತೆರಳಲು ಕೋರ್ಟ್ ಅನುಮತಿ ನೀಡಿದೆ.
ಪವಿತ್ರಾ ಗೌಡ ಪರವಾಗಿ ರವೀಂದ್ರ ಗೌಡ ಎಂಬುವರು ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ನ ನ್ಯಾಯಮೂರ್ತಿ ಜೈಶಂಕರ್ ವಿಚಾರಣೆ ನಡೆಸಿದರು.
ಮಾರ್ಚ್ 3ರಿಂದ 10 ಹಾಗೂ ಮಾರ್ಚ್ 17 ರಿಂದ 26 ರವರೆಗೆ ದೆಹಲಿ ಹಾಗೂ ಮುಂಬೈಗೆ ಪವಿತ್ರಾ ಗೌಡ ಅವರು ತಮ್ಮ ಅಂಗಡಿಗೆ ಬಟ್ಟೆ ಖರೀದಿಸಲು ತೆರಳುತ್ತಿದ್ದಾರೆ. ಇದಕ್ಕೆ ಅನುಮತಿ ನೀಡುವಂತೆ ಮನವಿ ಮಾಡಲಾಗಿತ್ತು. ಈ ಮನವಿ ಪುರಸ್ಕರಿಸಿರುವ ಕೋರ್ಟ್, ಪವಿತ್ರಾ ಗೌಡ ಅವರಿಗೆ ದೆಹಲಿ, ಮುಂಬೈಗೆ ತೆರಳಲು ಅನುಮತಿ ನೀಡಿದೆ.