ಹೊಸದಿಗಂತ ವರದಿ, ಮಂಗಳೂರು;
ಅಸೀಮಾ ಇಂಗ್ಲಿಷ್ ಪಾಕ್ಷಿಕದ ಮಾಜಿ ಸಂಪಾದಕ, ಹಿರಿಯ ಪತ್ರಕರ್ತ ದೀಪಕ್ ಕಾಮತ್ ಮಂಗಳವಾರ ವಿಧಿವಶರಾಗಿದ್ದಾರೆ.
ಮಂಗಳೂರಿನಿಂದ ಪ್ರಕಟಿತ ಕೆನರಾ ಟೈಮ್ಸ್ ಪತ್ರಿಕೆಯಿಂದ ತಮ್ಮ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದ ಕಾಮತ್ , ಹಲವು ಪತ್ರಿಕೆಗಳಲ್ಲಿ ತಮ್ಮ ಚೂಪಾದ ಬರಹಗಳ ಮೂಲಕ ಗುರುತಿಸಿಕೊಂಡಿದ್ದರು. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪತ್ರಿಕೆಗಳಲ್ಲಿಯೂ ಅವರ ಹಲವು ಬರಹಗಳು ಪ್ರಕಟವಾಗಿವೆ.