ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ. ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಿದೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡ ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ. ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ಕೊಟ್ಟ ಅನುದಾನ ನೋಡಿದ್ರೆ, ಇದು ಮುಸಲ್ಮಾನರ ಸರ್ಕಾರ ಅನ್ನೋದನ್ನ ಮತ್ತೊಮ್ಮೆ ಸಾಬೀತು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.