ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ಬಾರಿ ಬಜೆಟ್‌ನಲ್ಲಿ ಮುಸ್ಲಿಮರಿಗೆ ಮೀಸಲಾತಿ ಕೊಟ್ಟಿದ್ದಾರೆ. ಅದು ಸರಿಯಾಗೋದಿಲ್ಲ, ನಾವು ಕೋರ್ಟ್‌ಗೆ ಹೋಗ್ತೀವಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕೊನೆಯ ಬಜೆಟ್ ಅಂತ ತಾನು ಹೇಳಲ್ಲ, ಅದರೆ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರದ್ದೇ ಕೊನೆಯ ಬಜೆಟ್ ಅಂತ ಹೇಳುತ್ತೇನೆ.
ಕಾಂಗ್ರೆಸ್ ಪಕ್ಷದಲ್ಲಿ ನಡೆಯುತ್ತಿರುವ ಜಗಳಗಳನ್ನು ನೋಡುತ್ತಿದ್ದರೆ ಇದೇ ಸರ್ಕಾರದ ಕೊನೆಯ ಬಜೆಟ್ ಆಗಬಹುದು ಎಂದು ಹೇಳಿದರು