ದರ್ಶನ್ ಅನ್​ಫಾಲೋ ವಿಚಾರ: ಕೊನೆಗೂ ಉತ್ತರ ನೀಡಿದ ಸುಮಲತಾ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸೋಶಿಯಲ್ ಮೀಡಿಯಾದಲ್ಲಿ ಸುಮಲತಾ ಸೇರಿದಂತೆ ಎಲ್ಲರನ್ನೂ ದರ್ಶನ್ ಅನ್‌ಫಾಲೋ ಮಾಡಿದ ವಿಚಾರ ಹೆಚ್ಚಿನ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ಈ ಸಂಬಂಧ ಸುಮಲತಾ ಅವರೇ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸರಣಿ ಪೋಸ್ಟ್​ ಶೇರ್ ಮಾಡಿದ ಬೆನ್ನಲ್ಲೇ ಮಾಜಿ ಸಂಸದೆ ಸುಮಲತಾ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ನನ್ನ ಪೋಸ್ಟ್​ಗಳಿಗೂ- ದರ್ಶನ್​ಗೂ ಯಾವುದೇ ಸಂಬಂಧವಿಲ್ಲ. ಇನ್​ಸ್ಟಾಗ್ರಾಮ್​​ನಲ್ಲಿ ಅನ್​ಫಾಲೋ ಮಾಡೋದು ಅವರ ವೈಯಕ್ತಿಕ ವಿಚಾರ. ತಾಯಿ- ಮಗನ ಸಂಬಂಧ ನಮ್ಮದು. ಇದರಲ್ಲಿ ಅನಗತ್ಯ ವಿವಾದ ಬೇಡ ಅಂತಾ ತಿಳಿಸಿದ್ದಾರೆ.

ನನ್ನ ಪೋಸ್ಟ್​ ಕುರಿತು ಅನಗತ್ಯವಾದ ವಿವಾದ ಸೃಷ್ಟಿ ಆಗಿರುವುದರಿಂದ ಈ ಸ್ಪಷ್ಟನೆ ನೀಡುತ್ತಿದ್ದೇನೆ. ಯಾರನ್ನೂ ಗುರಿಯಾಗಿಸಿ ಪೋಸ್ಟ್ ಮಾಡಿರುವುದು ಅಲ್ಲ. ಅದು ಸರಳವಾಗಿ ಹಂಚಿಕೊಂಡ ವಿಷಯ ಮಾತ್ರ. ನನ್ನನ್ನು ಯಾರು ಫಾಲೋ ಮಾಡುತ್ತಾರೆ, ಯಾರು ಅನ್​ಫಾಲೋ ಮಾಡುತ್ತಾರೆ ಎನ್ನುವ ಗಮನಿಸುವ ಅಭ್ಯಾಸ ಹೊಂದಿಲ್ಲ ಎಂದು ಹೇಳಿದ್ದಾರೆ.

ತಾಯಿ ಮಗನ ಸಂಬಂಧದಲ್ಲಿ ಅನಗತ್ಯವಾದ ವಿವಾದ ಸೃಷ್ಟಿಸುವುದು ಬೇಡ. ನನ್ನ ಪೋಸ್ಟ್​ಗಳು ಯಾರನ್ನೂ ಉದ್ದೇಶಿಸಿಲ್ಲ. ನನ್ನ ಕುಟುಂಬ ಹಾಗೂ ಆಪ್ತರ ವಿಚಾರಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಳೆದು ತರುವ ಅಭ್ಯಾಸ ಯಾವತ್ತೂ ಹೊಂದಿಲ್ಲ ಎಂದು ಸರಣಿ ಪೋಸ್ಟ್​ಗಳ ಬಗ್ಗೆ ಸುಮಲತಾ ಅವರು ಅಂತಿಮ ತೆರೆ ಎಳೆದಿದ್ದಾರೆ.

ದರ್ಶನ್ ಅವರು ಇನ್‌ಸ್ಟಾಗ್ರಾಂ ಮತ್ತು ಟ್ವಿಟರ್‌ನಲ್ಲಿ ಯಾರನ್ನೂ ಫಾಲೋ ಮಾಡುತ್ತಿಲ್ಲ. ನನಗೆ ಅಂತ ವಿಶೇಷವಾಗಿ ಯಾಕೆ ಪಾಯಿಂಟ್ ಔಟ್ ಮಾಡುತ್ತೀರಿ, ನನಗೆ ಗೊತ್ತಾಗುತ್ತಿಲ್ಲ. ಇದು ಅವರ ವೈಯಕ್ತಿಕ ಆಯ್ಕೆ. ನಾನು ಜನರಲ್ ಆಗಿ ಪೋಸ್ಟ್ ಮಾಡಿದ್ದೇನೆ. ನಾನು ಬರೆದ ಸಾಲುಗಳಲ್ಲ ಅವು, ಎಲ್ಲೋ ನೋಡಿದ ಪೋಸ್ಟ್ ಹಾಕಿದ್ದೇನಷ್ಟೇ. ಯಾರನ್ನು ಟಾರ್ಗೆಟ್ ಮಾಡಿ, ಯಾರನ್ನು ಉದ್ದೇಶಿಸಿ ಪೋಸ್ಟ್ ಹಾಕಲ್ಲ. ಇನ್ನೂ ದರ್ಶನ್ ಬಗ್ಗೆ ನಾನು ನೆಗೆಟಿವ್ ಮಾತನಾಡುತ್ತೇನಾ? ದರ್ಶನ್ ಯಾವಾತ್ತಿದ್ದರೂ ನನ್ನ ಮಗ ಅಂತ ಮೊದಲಿನಿಂದಲೂ ಹೇಳುತ್ತಲೇ ಇದ್ದೇನೆ. ಅದು ಅವತ್ತಿಗೂ ಅಷ್ಟೇ, ಇವತ್ತಿಗೂ ಅಷ್ಟೇ. ನನ್ನ ಪ್ರೀತಿ ಮತ್ತು ಅಭಿಮಾನ ಯಾವತ್ತಿಗೂ ಒಂದೇ ತರಹ ಇರುತ್ತದೆ. ಆ ಪೋಸ್ಟ್‌ಗೂ, ದರ್ಶನ್‌ಗೂ ಯಾವುದೇ ಸಂಬಂಧವಿಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!