ಸಾಮಾಗ್ರಿಗಳು
ಕಡಲೆಹಿಟ್ಟು- 100 ಗ್ರಾಂ
ಅಕ್ಕಿಹಿಟ್ಟು- 40 ಗ್ರಾಂ
ಈರುಳ್ಳಿ- 2 ದೊಡ್ಡದು (ತೆಳ್ಳಗೆ ಹೆಚ್ಚಿಟ್ಟುಕೊಳ್ಳಿ)
ದನಿಯಾ ಪುಡಿ- ಅರ್ಧಚಮಚ
ಜೀರಿಗೆ- ಅರ್ಧ ಚಮಚ
ಖಾರದಪುಡಿ- 1 ಚಮಚ
ಅರಿಶಿನ- ಸ್ವಲ್ಪ
ಕಾಳು ಮೆಣಸಿನಪುಡಿ- ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಕರಿಬೇವು- ಸ್ವಲ್ಪ
ಹಸಿಮೆಣಸಿನ ಕಾಯಿ- 4 (ಸಣ್ಣಗೆ ಹೆಚ್ಚಿಟ್ಟುಕೊಳ್ಳಿ)
ಚೀಸ್- 200 ಗ್ರಾಂ
ಎಣ್ಣೆ- ಕರಿಯಲು
ಮಾಡುವ ವಿಧಾನ
ಮೊದಲು ಚೀಸ್ ಸ್ವಲ್ಪ ತುರಿದುಕೊಳ್ಳಿ, ಹಾಗೇ 10 ಪೀಸ್ ಹದಗಾತ್ರದಲ್ಲಿ ಕತ್ತರಿಸಿಕೊಳ್ಳಿ. ಒಂದು ಬೌಲ್ ಗೆ ಕಡಲೆಹಿಟ್ಟು, ಅಕ್ಕಿ ಹಿಟ್ಟು, ಖಾರದಪುಡಿ, ಅರಿಶಿನ, ಜೀರಿಗೆ, ದನಿಯಾ ಪುಡಿ, ಕರಿಬೇವು, ಕಾಳುಮೆಣಸಿನ ಪುಡಿ, ಉಪ್ಪು, ತುರಿದ ಚೀಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಮಿಶ್ರಣ ಉಂಡೆಗಳನ್ನಾಗಿ ಮಾಡಿ, ಮಧ್ಯೆ ಚೀಸ್ ಪೀಸ್ ಗಳನ್ನು ಇಟ್ಟು ಮತ್ತೆ ಉಂಡೆ ಮಾಡಿ, ಕಾದ ಬಿಸಿ ಎಣ್ಣೆಯಲ್ಲಿ ಚಿನ್ನದ ಬಣ್ಣ ಬರುವವರೆಗೆ ಕರಿಯಿಸಿ. ಇದೀಗ ರುಚಿಕರವಾದ ಈರುಳ್ಳಿ ಚೀಸ್ ಪಕೋಡಾ ಸವಿಯಲು ಸಿದ್ಧ.