ಹೊಸದಿಗಂತ ಡಿಜಿಟಲ್ ಡೆಸ್ಕ್:
2013ರಲ್ಲಿ ಹಲ್ಲೆ ಅಟ್ರಾಸಿಟಿ ಪ್ರಕರಣದಲ್ಲಿ ಸಚಿವ ಕೆ ಎಸ್ ಮುನಿಯಪ್ಪ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ನೀಡಿ ಆದೇಶಿಸಿದ್ದಾರೆ.
2013ರ ಹಲ್ಲೆ ಅಟ್ರಾಸಿಟಿ ಕೇಸ್ ನಲ್ಲಿ ಸಚಿವ ಕೇಸ್ ಮುನಿಯಪ್ಪ ವಿರುದ್ಧ ರಾಬರ್ಟ್ ಸನ್ ಪೇಟೆ ಪೊಲೀಸರು ಕೂಡ ಬಿ ರಿಪೋರ್ಟ್ ಸಲ್ಲಿಸಿದ್ದರು. ಈ ವೇಳೆ ಕೊರ್ಯೆ ಬಿ ರಿಪೋರ್ಟ್ ತಿರಸ್ಕರಿಸಿದ ಮೇಲೆ ಸಚಿವ ಮುನಿಯಪ್ಪಗೆ ಸಮನ್ಸ್ ಜಾರಿಗೊಳಿಸಿತ್ತು. ಹಾಗಾಗಿ ಇಂದು ಖುದ್ದು ಹಾಜರಾಗಬೇಕಿತ್ತು
ಆದರೆ ಇಂದು ಅವರು ಕೋರ್ಟಿಗೆ ಗೈರು ಹಾಜರಾಗಿದ್ದರು. ಹಾಗಾಗಿ ಜನಪ್ರತಿನಿಧಿ ವಿಶೇಷ ಕೋರ್ಟ್ ಜಡ್ಜ್ ಸಂತೋಷ್ ಗಜಾನನ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ವಾರಂಟಿ ಜಾರಿಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಇದೀಗ ಸಚಿವ ಕೆ ಎಸ್ ಮುನಿಯಪ್ಪ ಹಾಜರಾಗಿದ್ದು, ಅಟ್ರಾಸಿಟಿ ಕೇಸ್ನಲ್ಲಿ ಸಚಿವ ಮುನಿಯಪ್ಪಗೆ ಜಾಮೀನು ಮಂಜೂರು ನೀಡಿ ಜಡ್ಜ್ ಅದೇಶಿಸಿದ್ದಾರೆ.