ಹೊಸದಿಗಂತ ಡಿಜಿಟಲ್ ಡೆಸ್ಕ್;
ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ತೀವ್ರ ಸಂಚಲನ ಸೃಷ್ಟಿಸಿದ್ದು, ಹಿರಿಯ ಸಚಿವ ಕೆಎನ್ ರಾಜಣ್ಣ ತಮ್ಮ ವಿರುದ್ಧವೂ ಹನಿಟ್ರ್ಯಾಪ್ ನಡೆದಿದೆ ಎಂದು ಸದನದಲ್ಲಿ ಆರೋಪಿಸಿದರು. ಈ ಚರ್ಚೆಯ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನ ಸ್ಯಾಂಕಿ ಕೆರೆಗೆ ಭೇಟಿ ನೀಡಿದ ಡಿಕೆ ಶಿವಕುಮಾರ್, ನಾಳೆ ನಡೆಯಲಿರೋ ಗಂಗಾ ಆರತಿ ಸಿದ್ಧತೆ ಕುರಿತು ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಸದನದಲ್ಲಿ ಪ್ರತಿಧ್ವನಿಸಿದ ಹನಿಟ್ರ್ಯಾಪ್ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಅವರು, ತೊಂದ್ರೆ ಆಗಿದ್ರೆ ಯಾರಾದ್ರು ಹೋಗಿ ಕಂಪ್ಲೆಂಟ್ ಮಾಡಲಿ, ಪ್ರೆಸ್ ಮುಂದೆ ಮಾತಾಡಿದ್ರೆ ಆಗುತ್ತಾ? ನಾನೆ ಬೆಳಗ್ಗೆ ಹೇಳಿದ್ದೀನಿ ಅಲ್ವಾ, ನಾನು ಕೂಡ ತನಿಖೆ ಮಾಡ್ಬೇಕು ಅಂತಾ ಒತ್ತಾಯ ಮಾಡಿದ್ದೀನಿ ಅಲ್ವಾ ಎಂದರು.