ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಹಗ್ಗಜಗ್ಗಾಟ ಮುಂದುವರೆದಿದೆ. ಈ ಬಾರಿ ಮಂಡಿಸಲಾಗಿದ್ದ ಗ್ರೇಟರ್ ಬೆಂಗಳೂರು ವಿಧೇಯಕ ವಾಪಾಸ್ ಮಾಡಲಾಗಿದೆ. ಗ್ರೇಟರ್ ಬೆಂಗಳೂರಿನ ಕೆಲವು ಯೋಜನೆಗಳ ವಿಧೇಯಕವನ್ನು ರಾಜ್ಯಪಾಲರು ನಿರಾಕರಿಸಿ ಸರ್ಕಾರಕ್ಕೆ ಟಿಪ್ಪಣಿ ಕಳಸಿದ್ದಾರೆ.
ದೆಹಲಿ ಏಳು ಪಾಲಿಕೆ ಪ್ರತ್ಯೇಕಗೊಳಿಸಿರುವ ಪ್ರಯೋಗ ವಿಫಲ ಮತ್ತು ವಿಧೇಯಕ ವಿರೋಧಿಸಿದ ಸಂಘಟನೆ, ಸಂಸ್ಥೆ, ವಿಪಕ್ಷ ನಾಯಕರ ಮನವಿ ಪ್ರಸ್ತಾಪಿಸಿ ಪುನರ್ ಪರಿಶೀಲಿಸಿ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ವಿವರಣೆ ಕೇಳಿದ್ದಾರೆ.
ಗ್ರೇಟರ್ ಬೆಂಗಳೂರು ಅಗತ್ಯವಿದೆ. ಬೆಂಗಳೂರು ಜನಸಂಖ್ಯೆ 1.5 ಕೋಟಿ ತಲುಪಿದೆ. 786 ಚ.ಕಿ.ಮೀ. ನಗರ ವಿಸ್ತರಣೆಯಾಗಿದೆ. ಒಬ್ಬ ಮೇಯರ್, ಒಬ್ಬ ಕಮಿಷಿನರ್ ನಿರ್ವಹಣೆ ಮಾಡಲಾಗುವುದಿಲ್ಲ. ಅಧಿಕಾರ ವಿಕೇಂದ್ರೀಕರಣ ಅಗತ್ಯವಿದೆ ಎಂಬ ಕಾರಣ ನೀಡಿ ಸರ್ಕಾರ ವಿಧೇಯಕ ಮಂಡನೆ ಮಾಡಿತ್ತು. ಇದಕ್ಕೆ ಪುನಃ ಪರಿಶೀಲಿಸಿ ವಿವರಣೆ ಕೊಡಿ ಎಂದು ರಾಜ್ಯಪಾಲರು ವಿಧೇಯಕ ನಿರಾಕರಿಸಿದ್ದಾರೆ.