ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಪರ್, ನಟ ಹಾಗೂ ಸಂಗೀತ ನಿರ್ದೇಶಕ ಚಂದನದ ಶೆಟ್ಟಿ ಖಾಸಗಿ ಸಂದರ್ಶನದಲ್ಲಿ ತಮ್ಮ ಎರಡನೇ ಮದುವೆ ಬಗ್ಗೆ ಮಾತನ್ನಾಡಿದ್ದಾರೆ. ಅದೇನು ಹೇಳಿದ್ದಾರೆ ನೋಡಿ..
‘ಫಸ್ಟ್ ಆಪ್ ಆಲ್, ನಂಗೆ ಅವ್ಳನ್ನ ಮದ್ವೆ ಆಗ್ಬೇಕು ಅಂತ ಅನ್ನಿಸ್ಬೇಕು, ಹಾಗೆ ಆ ಹುಡ್ಗಿ ಇರ್ಬೇಕು.. ಬರುವಂತಹ ಹುಡುಗಿ ನನ್ನ ಅಷ್ಟು ಜಾಸ್ತಿ ಪ್ರೀತಿ ಮಾಡ್ಬೇಕು.. ನಾನಂತೂ ನನ್ ಲೈಫಲ್ಲಿ ಬರೋ ಹುಡ್ಗಿನಾ ಪ್ರೀತಿ ಮಾಡ್ತೀನಿ, ಆದ್ರೆ ಅವ್ಳು ನನಗಿಂತ ಜಾಸ್ತಿ ಪ್ರೀತಿ ಮಾಡ್ಬೇಕು.. ಆ ರೀತಿಯಾಗಿರೋ ಹುಡ್ಗಿ ನಂಗೆ ಸಿಕ್ಕಿದ್ರೆ ಖಂಡಿತವಾಗಿಯೂ ನಾನು ಆ ಬಗ್ಗೆ ಯೋಚ್ನೆ ಮಾಡ್ತೀನಿ, ಮದ್ವೆನೂ ಆಗ್ತೀನಿ.. ‘ಎಂದಿದ್ದಾರೆ.
ಮೊದಲ ಮದ್ವೆ ಡಿವೋರ್ಸ್ ಆಗಿರೋ ಬಗ್ಗೆ ಚಿಂತೆ ಮಾಡಿ ಸಣ್ಣ ಆಗಿದೀರಾ’ ಎಂಬ ಪ್ರಶ್ನೆಗೆ ಕೂಡ ಚಂದನ್ ಶೆಟ್ಟ ತುಂಬಾ ಬುದ್ದಿವಂತಿಕೆಯಿಂದ ಉತ್ತರಿಸಿದ್ದಾರೆ. ‘ನಾನು ಡಯಟ್ ಮಾಡಿ ಸಣ್ಣ ಆಗಿರೋದು, ಯೋಚ್ನೆ ಮಾಡಿ ಅಲ್ಲ.. ಹಾಗೆ ನೋಡಿದ್ರೆ ಡಿಪ್ರೆಶನ್‌ನಲ್ಲಿ ಇರೋರೇ ಜಾಸ್ತಿ ತಿಂದು ದಪ್ಪ ಆಗೋದು.
ನಾನು ಹೆಲ್ತಿ ಫುಡ್ ತಿಂದು, ಡೈಲಿ ಜಿಮ್, ಎಕ್ಸರಿಸೈಜ್ ಮಾಡಿ, ಡಯಟ್ ಮಾಡಿ ಸಣ್ಣ ಆಗಿರೋದು.. ನಾನು ಖಂಡಿತವಾಗಿಯೂ ತುಂಬಾ ಖುಷಿಯಾಗಿದೀನಿ..ನಂಗೆ ಯಾವ್ದೇ ಚಿಂತೆ ಇಲ್ಲ ಈಗ, ಆರಾಮ್ ಆಗಿದೀನಿ.. ನಾನೀಗ ಹೆಚ್ಚು ಹೆಚ್ಚು ಕೆಲಸದ ಬಗ್ಗೆ ಮನಸ್ಸು ಕೇಂದ್ರೀಕರಿಸ್ತಾ ಇದೀನಿ.. ನಾನು ಇನ್ನೂ ನೋಡದಿರುವ ಜಾಗಗಳನ್ನು ನೋಡ್ತಾ, ನನ್ನ ಲೈಫ್‌ನ ಎಂಜಾಯ್ ಮಾಡ್ತಾ ಇದೀನಿ.. ಎಂದು ಹೇಳಿದ್ದಾರೆ.