April 11, 2026
Saturday, April 11, 2026
spot_img

ದಿನಭವಿಷ್ಯ: ನೀವೇ ಬಗ್ಗಿದರೂ ಪರವಾಗಿಲ್ಲ, ಹದಗೆಟ್ಟ ಸಂಬಂಧ ದಾರಿಗೆ ಬರಲೇಬೇಕು

ಮೇಷ
ಹದಗೆಟ್ಟ ಸಂಬಂಧ ಸರಿದಾರಿಗೆ ತನ್ನಿ. ನೀವೇ ಬಗ್ಗಿದರೂ ಪರವಾಗಿಲ್ಲ. ಆರ್ಥಿಕ ವ್ಯವಹಾರ ತುಸು ಕಷ್ಟ ಎದುರಿಸಲಿದೆ. ಹಣದ ಬಿಕ್ಕಟ್ಟು ಸಂಭವ.  
ವೃಷಭ
ಅಽಕ ಹೊಣೆ. ನಿಭಾಯಿಸಲು ಕಷ್ಟ ಆದೀತು. ಸಂಬಂಧ ಸದೃಢ. ಆರ್ಥಿಕ ಅಸ್ಥಿರತೆ ನಿವಾರಣೆ, ಧನಾಗಮ. ಬಂಧು ಭೇಟಿ.      
ಮಿಥುನ
ನಿಮ್ಮ ಸಾಮರ್ಥ್ಯ ಒರೆಗೆ ಹಚ್ಚುವ ಪ್ರಸಂಗ ಒದಗಲಿದೆ. ಉದ್ಯೋಗ ಬದಲಾವಣೆಯ ಅವಕಾಶ ಸಿಗಲಿದೆ. ದಂಪತಿಗಳಿಗೆ ಹರ್ಷದ ಬೆಳವಣಿಗೆ.
ಕಟಕ
ಒತ್ತಡವು ನಿಮಗೆ ಕೆಲಸದಲ್ಲಿ ಏಕಾಗ್ರತೆ ತಪ್ಪಿಸುವುದು. ಸಂಬಂಧ ದಲ್ಲಿ ಒಡಕು, ವಾಗ್ವಾದ. ಅನಿರೀಕ್ಷಿತ ಖರ್ಚು ಬರುವುದು.    
ಸಿಂಹ
ಉತ್ಸಾಹದ ಮನಸ್ಥಿತಿ. ಹಾಗಾಗಿ ನಿಮ್ಮ ಉದ್ದೇಶ ಈಡೇರಿಸುವುದು ಕಷ್ಟವಲ್ಲ. ಅದೃಷ್ಟವನ್ನು ಕಾಯುತ್ತಾ ಕೂರಬೇಡಿ. ನೀವೇ ಕಾರ್ಯಕ್ಕಿಳಿಯಬೇಕು.    
ಕನ್ಯಾ
ಗೊಂದಲದ ಮನಸ್ಥಿತಿ. ಇದರಿಂದ ದೈನಂದಿನ ವ್ಯವಹಾರ ಅಸ್ತವ್ಯಸ್ತವಾದೀತು. ನಿಷ್ಕ್ರಿಯರಾಗಿ ಕೂರದಿರಿ. ಕೌಟುಂಬಿಕ ವಾಗ್ವಾದ.  
ತುಲಾ
ನಿಮ್ಮ ಸುತ್ತಲಿನ ಜನರ ಜತೆ ಉತ್ತಮ ಸಂವಹನ ಇಟ್ಟುಕೊಳ್ಳಿ. ತಪ್ಪಭಿಪ್ರಾಯ ಮೂಡದಂತೆ ಎಚ್ಚರಿಕೆ ವಹಿಸಿರಿ.    
ವೃಶ್ಚಿಕ
ವೃತ್ತಿ ಒತ್ತಡ ಕಡಿಮೆ. ಆದರೆ ಮನೆಯಲ್ಲಿ ಬಿಡುವಿಲ್ಲದ ಕಾರ್ಯ. ದೈಹಿಕ ಅಸ್ವಸ್ಥತೆ ನಿವಾರಣೆ. ಸಂಬಂಧದಲ್ಲಿ ಸುಧಾರಣೆ, ಬಂಧುಗಳ ಸಹಕಾರ.    
ಧನು
ಖಾಸಗಿ ವ್ಯವಹಾರ ಸುಗಮವಾಗಿ ನಡೆವುದು. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ  ಬಿಕ್ಕಟ್ಟು ಸಂಭವ. ಆದರೆ ಸಂಜೆ ವೇಳೆಗೆ ನಿರಾಳತೆ.    
ಮಕರ
ಕೆಲವು ಬಿಕ್ಕಟ್ಟು ಪರಿಹರಿಸುವ ಹೊಣೆ ನಿಮ್ಮ ಹೆಗಲೇರುವುದು. ಕೆಲವರ ನಿಷ್ಠುರ ಕಟ್ಟಿಕೊಳ್ಳುವಿರಿ. ನಿಮ್ಮ ನಿಲುವು ಬಿಗಿಯಾಗಿರಲಿ.  
ಕುಂಭ
ನಿಮಗೆ ಪೂರಕ ದಿನ. ಪ್ರತಿಕೂಲ ಪರಿಸ್ಥಿತಿ ತಿಳಿಯಾಗಲಿದೆ. ಭಿನ್ನಮತ ಪರಿಹಾರ. ಕೌಟುಂಬಿಕ ನೆಮ್ಮದಿ, ಸಹಕಾರ. ಮೆಚ್ಚಿನ ವಸ್ತು ಖರೀದಿ.
 ಮೀನ
ಹಿರಿಯರ ಮೆಚ್ಚುಗೆ, ಬೆಂಬಲ ಪಡೆಯುವಿರಿ. ಸಂಗಾತಿ ಜತೆಗಿನ ಮುನಿಸು ಪರಿಹಾರ. ಆರ್ಥಿಕ ಪರಿಸ್ಥಿತಿ ಉತ್ತಮ. ಅನಿರೀಕ್ಷಿತ ಧನಲಾಭ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !