October 6, 2026
Tuesday, October 6, 2026
spot_img

ತಡರಾತ್ರಿ ಚನ್ನಪಟ್ಟಣ ಸರ್ಕಾರಿ ಆಸ್ಪತ್ರೆಗೆ ಸಚಿವ ಖಾದರ್ ದಿಢೀರ್ ಭೇಟಿ: ಕರ್ತವ್ಯ ಮರೆತ ಸಿಬ್ಬಂದಿಗೆ ತರಾಟೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯರಾತ್ರಿ ಎರಡು ಗಂಟೆಗೆ ಆರೋಗ್ಯ ಸಚಿವ ಯು.ಟಿ. ಖಾದರ್‌ ಚನ್ನಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಖಾಸಗಿ ಕಾರ್ಯಕ್ರಮಕ್ಕಾಗಿ ಖಾದರ್‌ ಅವರು ಚನ್ನಪಟ್ಟಣಕ್ಕೆ ಆಗಮಿಸಿದ್ದರು. ಈ ವೇಳೆ ಮಧ್ಯರಾತ್ರಿ ಆಸ್ಪತ್ರೆಗೆ ದಿಢೀರ್‌ ಆಗಮಿಸಿದ್ದು, ಜನರಲ್‌ ವಾರ್ಡ್‌, ಐಸಿಯು, ಶೌಚಾಲಯವನ್ನು ಪರಿಶೀಲನೆ ಮಾಡಿದರು. ಇನ್ನು ಸಿಬ್ಬಂದಿ ಹಾಜರಾತಿ ಪರಿಶೀಲನೆ ನಡೆಸಿ ವೈದ್ಯರ ಜೊತೆ ಮಾತುಕತೆ ನಡೆಸಿದ್ದಾರೆ.

ಔಷಧವನ್ನು ಹೊರಗಿನ ಅಂಗಡಿಗಳಲ್ಲಿ ತರೋದಕ್ಕೆ ಹೇಳುತ್ತೀರೇ ಅಥವಾ ಇಲ್ಲಿಯೇ ನೀಡುತ್ತೀರೇ ಎಂದು ಕೇಳಿದ್ದಾರೆ. ಆಗ ಔಷಧಗಳನ್ನು ಹೊರಗಡೆಯ ಮೆಡಿಕಲ್‌ಗಳಿಗೆ ಬರೆದುಕೊಡುತ್ತೇವೆ ಎಂದು ಹೇಳಲಾಗಿದೆ. ಆಗ ಖಾದರ್‌ ಗರಂ ಆಗಿದ್ದು, ಇಷ್ಟೆಲ್ಲಾ ಸೌಲಭ್ಯ ಕೊಟ್ಟರೂ ಹೊರಗಡೆಯಿಂದ ಮಾತ್ರೆಗಳನ್ನು ತರೋದ್ಯಾಕೆ? ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಿ ಎಂದು ಹೇಳಿದ್ದಾರೆ.

Must Read