February 1, 2026
Sunday, February 1, 2026
spot_img

ಇವತ್ತೇ ತಗೊಂಡು ಬಿಡಿ! ಚಿನ್ನ–ಬೆಳ್ಳಿ ಬೆಲೆಯಲ್ಲಿ ಭಾರೀ ಇಳಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ತೀವ್ರ ಕುಸಿತ ಮುಂದುವರಿದಿದ್ದು, ಆಭರಣ ಮಾರುಕಟ್ಟೆಯಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಕಳೆದ ಎರಡು ದಿನಗಳಲ್ಲಿ ಚಿನ್ನದ ಬೆಲೆ ಗ್ರಾಮ್‌ಗೆ ಸಾವಿರ ರೂಪಾಯಿಗೂ ಹೆಚ್ಚು ಇಳಿಕೆಯಾಗಿದ್ದು, ಹೂಡಿಕೆದಾರರು ಮತ್ತು ಗ್ರಾಹಕರು ಎಚ್ಚರಿಕೆಯಿಂದ ಮಾರುಕಟ್ಟೆ ಮೇಲೆ ಹೆಚ್ಚಿನ ಗಮನಹರಿಸಿದ್ದಾರೆ.

ಶುಕ್ರವಾರ ಗ್ರಾಮ್‌ಗೆ ಸುಮಾರು 800 ರೂಪಾಯಿ ಇಳಿಕೆಯಾದ ಚಿನ್ನದ ದರ, ಶನಿವಾರ 920 ರೂಪಾಯಿ ಕುಸಿತ ಕಂಡಿದೆ. ಇದರ ಪರಿಣಾಮವಾಗಿ ಕೇವಲ ಎರಡು ದಿನಗಳಲ್ಲಿ ಚಿನ್ನದ ಬೆಲೆ ಒಂದೂವರೆ ಸಾವಿರ ರೂಪಾಯಿಗೂ ಅಧಿಕವಾಗಿ ತಗ್ಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿರುವುದು ದೇಶೀಯ ದರಗಳ ಮೇಲೂ ಪರಿಣಾಮ ಬೀರಿದೆ.

ಇದನ್ನೂ ಓದಿ:

ಬೆಳ್ಳಿ ಬೆಲೆ ಕೂಡ ಭಾರೀ ಕುಸಿತ ಅನುಭವಿಸಿದ್ದು, ಒಂದೇ ದಿನದಲ್ಲಿ ಗ್ರಾಮ್‌ಗೆ 45 ರೂಪಾಯಿ ಇಳಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ ಒಟ್ಟು 60 ರೂಪಾಯಿ ಇಳಿಕೆಯೊಂದಿಗೆ ಬೆಳ್ಳಿ ಹೂಡಿಕೆದಾರರಿಗೆ ಅಚ್ಚರಿ ಮೂಡಿಸಿದೆ.

ಪ್ರಸ್ತುತ ಭಾರತದಲ್ಲಿ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1.47 ಲಕ್ಷ ರೂಪಾಯಿ ಇದ್ದು, 24 ಕ್ಯಾರಟ್ ಚಿನ್ನದ ದರ 1.60 ಲಕ್ಷ ರೂಪಾಯಿಗೆ ತಲುಪಿದೆ. ಬೆಳ್ಳಿಯ ದರ 100 ಗ್ರಾಮ್‌ಗೆ 35 ಸಾವಿರ ರೂಪಾಯಿಯಷ್ಟಿದೆ. ಬೆಂಗಳೂರಿನಲ್ಲೂ ಇದೇ ದರ ಮುಂದುವರಿದಿದ್ದು, ತಮಿಳುನಾಡು, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲೂ ಸಮಾನ ಬೆಲೆ ದಾಖಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !