ಹೊಸದಿಗಂತ ಡಿಜಿಟಲ್ ಡೆಸ್ಕ್:
ನಂದಿನಿ ಹಾಲು ಮತ್ತು ಮೊಸರಿನ ಬೆಲೆ ಏರಿಕೆಯಿಂದ ರಾಜ್ಯಾದ್ಯಂತ ಗ್ರಾಹಕರ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಮೊಸರಿನ ದರವನ್ನು ಪ್ರತಿ ಲೀಟರ್ಗೆ 2 ರೂ. ಕಡಿಮೆ ಮಾಡುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ. ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಈ ನಿರ್ಧಾರ ಸ್ವಲ್ಪಮಟ್ಟಿನ ಸಮಾಧಾನ ತಂದಿದೆ.
ಮೊಸರಿನ ದರ ಇಳಿಕೆಗೆ ಸೂಚನೆ
ನಂದಿನಿ ಹಾಲಿನ ಬೆಲೆ ಏರಿಕೆಯ ಬೆನ್ನಲ್ಲೇ ಮೊಸರಿನ ದರವೂ ಹೆಚ್ಚಳವಾಗಿತ್ತು. ಅರ್ಧ ಲೀಟರ್ ಮೊಸರಿನ ಬೆಲೆ 28 ರೂ.ನಿಂದ 34 ರೂ.ಗೆ ಹಾಗೂ ಒಂದು ಲೀಟರ್ ಮೊಸರಿನ ಬೆಲೆ 54 ರೂ.ನಿಂದ 68 ರೂ.ಗೆ ಏರಿಸಲಾಗಿತ್ತು. ಇದರಿಂದ ಗ್ರಾಹಕರ ಅಸಮಾಧಾನ ಹೆಚ್ಚಾಗಿತ್ತು.
ಇದನ್ನೂ ಓದಿ:
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಡಿಕೆಶಿ, ಕೆಎಂಎಫ್ ಹಾಗೂ ಜಿಲ್ಲಾ ಹಾಲು ಒಕ್ಕೂಟಗಳ ಪದಾಧಿಕಾರಿಗಳು ತಮ್ಮನ್ನು ಭೇಟಿಯಾಗಿದ್ದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಮೊಸರಿನ ಬೆಲೆಯನ್ನು 2 ರೂ. ಕಡಿಮೆ ಮಾಡುವಂತೆ ಸೂಚನೆ ನೀಡುವುದಾಗಿ ಹೇಳಿದರು. ಹಾಲಿನ ಪ್ಯಾಕೆಟ್ಗಳ ದರದ ಕುರಿತು ಅಧಿಕಾರಿಗಳು ಮಾಹಿತಿ ನೀಡಲಿದ್ದಾರೆ ಎಂದರು.
ರೈತರಿಗೆ ದರ ಏರಿಕೆಯ ಲಾಭ
ಹಾಲಿನ ಖರೀದಿ ದರವನ್ನು ಪ್ರತಿ ಲೀಟರ್ಗೆ 7 ರೂ. ಹೆಚ್ಚಿಸಿರುವುದರಿಂದ ರಾಜ್ಯದ ಸುಮಾರು 11 ಲಕ್ಷ ಹೈನುಗಾರ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ. ಗ್ರಾಹಕರಿಗೆ ಅನ್ವಯಿಸುವ ಹಾಲಿನ ದರದಲ್ಲಿಯೂ 8 ರೂ. ಹೆಚ್ಚಳ ಮಾಡಲಾಗಿದೆ.



