ನಟ ಬಾಬಿ ಸಿಂಹ ಕಾರು ಆಕ್ಸಿಡೆಂಟ್: ಕುಡಿದು ವಾಹನ ಚಲಾಯಿಸಿದ್ದೇ ಕಾರಣ ಎಂದ ಪೊಲೀಸರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಹುಭಾಷಾ ನಟ ಬಾಬಿ ಸಿಂಹ ಅವರಿಗೆ ಸೇರಿದ ಕಾರು ವಿವಿಧ ವಾಹನಗಳಿಗೆ ಡಿಕ್ಕಿ ಹೊಡೆದು ಮೂವರು ಗಾಯಗೊಂಡಿರುವ ಘಟನೆ ಚೆನ್ನೈಯಲ್ಲಿ ನಡೆದಿದೆ. ಕಾರು ಎಕ್ಕಾಡುತಂಗಲ್ ನಿಂದ ಚೆನ್ನೈ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಕುಡಿದು ವಾಹನ ಚಲಾಯಿಸಿದ್ದಕ್ಕಾಗಿ ಮತ್ತು ಅತಿ ವೇಗದಲ್ಲಿ ಚಾಲನೆ ಮಾಡಿದ್ದಕ್ಕಾಗಿ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಅಪಘಾತದ ಸಮಯದಲ್ಲಿ ನಟ ಕಾರಿನಲ್ಲಿ ಇರಲಿಲ್ಲ ಎಂದು ತಿಳಿದು ಬಂದಿದೆ.

ಆರೋಪಿ ಪುಷ್ಪರಾಜ್ ಕುಡಿದು ವಾಹನ ಚಲಾಯಿಸುತ್ತಿದ್ದ. ಕಥಿಪರಾ ಫ್ಲೈಓವರ್‌ನಿಂದ ಅಲಂದೂರ್ ಮೆಟ್ರೋ ನಿಲ್ದಾಣದ ಕಡೆಗೆ ಇಳಿಯುತ್ತಿದ್ದಾಗ, ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ಮೂರು ಮೋಟಾರ್‌ಸೈಕಲ್‌ಗಳು, ಎರಡು ಆಟೋರಿಕ್ಷಾಗಳು ಮತ್ತು ಒಂದು ಕಾರಿಗೆ ಡಿಕ್ಕಿ ಹೊಡೆದಿದೆ.

ರಕ್ಷಿತ್‌ ಶೆಟ್ಟಿ ನಟನೆಯ ʼ777 ಚಾರ್ಲಿʼ ಸಿನಿಮಾದಲ್ಲಿ ಬಾಬಿ ಸಿಂಹ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!