ಹೊಸದಿಗಂತ ಡಿಜಿಟಲ್ ಡೆಸ್ಕ್:
ನನ್ನ ಮಗ ಹಿಂದೂ ಅಂತಿದ್ದ ಹಾಗೆ ಗುಂಡಿಟ್ಟು ಕೊಂದು ಬಿಟ್ರು ಎಂದು ಮೃತ ಮಧುಸೂಧನ್ ಚಿಕ್ಕಪ್ಪ ಕಣ್ಣೀರಿಟ್ಟಿದ್ದಾರೆ.
ಪಹಲ್ಗಾಮ್ನಲ್ಲಿ ಗುಂಡಿನ ಮಳೆ ಸುರಿಸಿದ ಭಯೋತ್ಪಾದಕರು ಅಲ್ಲೇ ಇದ್ದ ಬಸ್ಗೂ ಹತ್ತಿದ್ದಾರೆ. ಪ್ರವಾಸಿಗರಿಗೆ ನಿಮ್ಮ ಐಡಿ ಕಾರ್ಡ್ ತೋರಿಸಿ ಎಂದು ಕೇಳಿದ್ದಾರೆ. ನೀವು ಹಿಂದುನಾ? ಮುಸ್ಲಿಂ ಅಂತ ಹೇಳಿದ್ದಾರೆ. ಮುಸ್ಲಿಂ ಅಂದವರಿಗೆ ಕುರಾನ್ ಓದು ಎಂದಿದ್ದಾರೆ. ಹಿಂದು ಎಂದವರನ್ನು ತಕ್ಷಣವೇ ಗುಂಡಿಕ್ಕಿ ಕೊಂದಿದ್ದಾರೆ.
ಪಹಲ್ಗಾಮ್ನಲ್ಲಿ ಇರುವ ಸಂಬಂಧಿಕರಿಂದ ನೇರ ಮಾಹಿತಿ ಪಡೆದ ಬೆಂಗಳೂರು ನಿವಾಸಿ ಚಿಕ್ಕಪ್ಪ ಅಲ್ಲಿ ನಡೆದ ಘಟನೆಯನ್ನು ವಿವರಿಸಿದ್ದಾರೆ.
ನನ್ನ ಮಗ ಮಧುಸೂದನ್ ತಾನು ಹಿಂದು ಅಂತ ಹೇಳಿಕೊಳ್ತಿದ್ದಂತೆ ಆತನನ್ನು ಹೆಂಡತಿ, ಮಕ್ಕಳ ಮುಂದೆ ಗುಂಡಿಕ್ಕಿ ಕೊಂದಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಮಧುಸೂದನ್ ಕಳೆದ 20 ವರುಷದಿಂದ ಬೆಂಗಳೂರಿನಲ್ಲಿ ಐಟಿ ಉದ್ಯೋಗಿಯಾಗಿ ಕೆಲಸ ಮಾಡಿದ್ದರು. ಐಬಿಎಂನಲ್ಲಿ ಕೆಲಸ ಮಾಡುತ್ತಿದ್ದ ಅವರು ಫ್ಯಾಮಿಲಿ ಸಮೇತ ಟೂರ್ ಹೋಗಿದ್ದರು. ಫ್ಯಾಮಿಲಿ ಹಾಗೂ ಆಫೀಸ್ನ ಕೆಲ ಕಲೀಗ್ಗಳು ಸೇರಿ ಟ್ರಿಪ್ ಪ್ಲ್ಯಾನ್ ಮಾಡಿದ್ದರು.