ಹೊಸದಿಗಂತ ಡಿಜಿಟಲ್ ಡೆಸ್ಕ್:
ನನಗೆ ಕೆಲಸ ಅಥವಾ ಹಣ ಬೇಡ. ನನ್ನ ಪತಿಗೆ ಹುತಾತ್ಮನ ಸ್ಥಾನಮಾನ ಮಾತ್ರ ಬೇಕು. ಈ ನೋವನ್ನು ನಾನು ನನ್ನ ಜೀವನದುದ್ದಕ್ಕೂ ಹೊತ್ತುಕೊಳ್ಳುತ್ತೇನೆ ಎಂದು ದಾಳಿಯಲ್ಲಿ ಬಲಿಯಾದ ಉತ್ತರ ಪ್ರದೇಶದ ಶುಭಂ ದ್ವಿವೇದಿ ಪತ್ನಿ ಅಶಾನ್ಯಾ ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದು 10 ದಿನ ಕಳೆದರೂ ಇಲ್ಲಿಯವರೆಗೂ ಸರ್ಕಾರ ದುಷ್ಕರ್ಮಿಗಳ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಂಡಿಲ್ಲ. ಶುಭಂಗೆ ಹುತಾತ್ಮ ಸ್ಥಾನಮಾನ ಸಿಕ್ಕಿಲ್ಲ ಅಥವಾ ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ಸರ್ಕಾರ ನಿರ್ಮೂಲನೆ ಮಾಡಿಲ್ಲಎಂದಿದ್ದಾರೆ.
ಮನೆಯಿಂದ ಹೊಗಲು ಭಯಪಡುತ್ತಿರುವ ಅಶಾನ್ಯಾ, ಮನೆಯ ಕೊಠಡಿಯಲ್ಲಿ ಶುಭಂ ಫೋಟೋ ಮತ್ತು ದಾಳಿಯ ಸಮಯದಲ್ಲಿ ಆತ ಧರಿಸಿದ್ದ ಶರ್ಟ್ ನೋಡುತ್ತಲೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ. ದಾಳಿಯ ಆಘಾತವನ್ನು ನೆನಪಿಸಿಕೊಂಡ ಅವರು ಟೈರ್ ಸಿಡಿಯುವ ಅಥವಾ ದೊಡ್ಡ ಶಬ್ದವೂ ನನ್ನನ್ನು ನಡುಗಿಸುತ್ತದೆ ಎಂದು ಹೇಳಿದ್ದಾರೆ.