April 21, 2026
Tuesday, April 21, 2026
spot_img

ನ್ಯಾಯವಾದಿಗಳ ಮನೆ ಮೇಲೆ ಕನ್ನ ಹಾಕಿದ ಖದೀಮರು: ಸಿಗದ ಹಣ, ದಾಖಲೆಗಳ ಕಳವು!

ಹೊಸದಿಗಂತ ವರದಿ, ವಿಟ್ಲ:

ನ್ಯಾಯವಾದಿಯೊಬ್ಬರ ಮನೆಗೆ ನುಗ್ಗಿ ಕಳ್ಳರು ಕಳ್ಳತನ ನಡೆಸಿದ ಘಟನೆ ವಿಟ್ಲದ ಒಕ್ಕೆತ್ತೂರು ರೋಯಲ್ ವಿಲ್ಲಾ ಸಮೀಪ ನಡೆದಿದೆ.

ಅಡ್ವಕೇಟ್ ಸಫಿಯಾ ನೌಫಲ್ ಅವರ ಮನೆಯಲ್ಲಿ ಈ ಕೃತ್ಯ ನಡೆದಿದೆ. ಮನೆಮಂದಿ ಎಲ್ಲ ಒಂದು ತಿಂಗಳ ಹಿಂದೆ ವಿದೇಶಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಮುಂಬಾಗಿಲು ಮುರಿದು ಒಳನುಗ್ಗಿದ ಕಳ್ಳರು ಮನೆಯ ಒಳಗಡೆ ಇದ್ದ ಕಪಾಟನ್ನು ಸ್ವತ್ತಿಗಾಗಿ ಹುಡುಕಾಟ ನಡೆಸಿದ್ದಾರೆ. ಅಲ್ಲಿ ಏನೂ ಸಿಗದ ಕಾರಣ ವಕೀಲೆಗೆ ಸಂಬಂಧಪಟ್ಟ ಕೆಲವು ದಾಖಲೆಗಳನ್ನು ಕೊಂಡೊಯ್ದಿದ್ದಾರೆ. ಈ ಘಟನೆ ಸ್ಥಳೀಯರ ಗಮನಕ್ಕೆ ಬಂದಿದ್ದು, ಅವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !