ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ವಿರುದ್ಧ ಪಂದ್ಯ ಆಡುವುದಿಲ್ಲ ಎಂಬ ಪಾಕಿಸ್ತಾನ ಸರ್ಕಾರದ ನಿಲುವು ದೊಡ್ಡ ಚರ್ಚೆಗೆ ಕಾರಣವಾಗಿದೆ. ಪಾಕಿಸ್ತಾನ ಸರ್ಕಾರ ತನ್ನ ಎಕ್ಸ್ (ಹಳೆಯ ಟ್ವಿಟರ್) ಖಾತೆ ಮೂಲಕ ಈ ನಿಲುವನ್ನು ಪ್ರಕಟಿಸಿದ್ದು, ನಿರ್ದಿಷ್ಟ ಕಾರಣವನ್ನು ಮಾತ್ರ ಸ್ಪಷ್ಟಪಡಿಸಿಲ್ಲ.
ಇತ್ತೀಚಿನ ದಿನಗಳಲ್ಲಿ ಉಂಟಾದ ರಾಜಕೀಯ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳೇ ಈ ತೀರ್ಮಾನಕ್ಕೆ ಹಿನ್ನೆಲೆ ಎನ್ನಲಾಗುತ್ತಿದೆ. ಇದಕ್ಕೂ ಮೊದಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಅಧ್ಯಕ್ಷ ಮೊಹ್ಸಿನ್ ನಖ್ವಿ, ತಂಡದ ಭಾಗವಹಿಸುವಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಪ್ರಧಾನಿ ಶೆಹಬಾಜ್ ಷರೀಫ್ ಅವರೊಂದಿಗೆ ನಡೆದ ಸಭೆಯ ನಂತರ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದಿದ್ದ ಅವರು, ಗಡುವಿಗೆ ಮುನ್ನವೇ ನಿರ್ಧಾರ ಪ್ರಕಟಿಸಿದ್ದಾರೆ.
ಇದನ್ನೂ ಓದಿ:
ಭಾರತ–ಪಾಕಿಸ್ತಾನ ಪಂದ್ಯ ನಡೆಯದಿದ್ದರೆ ಅದರ ಪರಿಣಾಮ ಗ್ರೂಪ್ ಹಂತದಲ್ಲೇ ಕಾಣಿಸಿಕೊಳ್ಳಲಿದೆ. ಗ್ರೂಪ್ ಎ ನಲ್ಲಿ ಭಾರತ, ಪಾಕಿಸ್ತಾನ, ಅಮೆರಿಕ, ನೆದರ್‌ಲ್ಯಾಂಡ್ಸ್ ಮತ್ತು ನಮೀಬಿಯಾ ತಂಡಗಳಿವೆ. ಭಾರತ ವಿರುದ್ಧದ ಪಂದ್ಯ ಕೈಬಿಟ್ಟರೆ ಪಾಕಿಸ್ತಾನಕ್ಕೆ ಅಮೂಲ್ಯ ಅಂಕ ನಷ್ಟವಾಗುವ ಸಾಧ್ಯತೆ ಇದ್ದು, ಸೂಪರ್ ಹಂತ ಪ್ರವೇಶ ಅಪಾಯಕ್ಕೆ ಸಿಲುಕಬಹುದು.
ಸಾಮಾನ್ಯವಾಗಿ ಪಂದ್ಯ ರದ್ದಾದರೆ ಉಭಯ ತಂಡಗಳು ತಲಾ 2 ಅಂಕಗಳನ್ನು ಹಂಚಿಕೊಳ್ಳುತ್ತವೆ. ಇದೀಗ ಪಾಕಿಸ್ತಾನ್ ಪಂದ್ಯವನ್ನು ಬಹಿಷ್ಕರಿಸುವುದರಿಂದ, ಪಾಕಿಸ್ತಾನಕ್ಕೆ 2 ಅಂಕ ನಷ್ಟವಾಗಲಿದೆ. ಟೀಮ್ ಇಂಡಿಯಾ ಪಂದ್ಯವಾಡಲು ಸಿದ್ಧವಾಗಿರುವುದರಿಂದ ಸಂಪೂರ್ಣ ಅಂಕಗಳನ್ನು ಭಾರತ ತಂಡ ಪಡೆಯಲಿದೆ.



