February 2, 2026
Monday, February 2, 2026
spot_img

ಅತಿಯಾದ ಅಪ್ಪುಗೆ ಉಸಿರುಗಟ್ಟಿಸುತ್ತಂತೆ! ಪಬ್ಲಿಕ್‌ನಲ್ಲಿ ಎರಡು ಹೆಜ್ಜೆ ಮುಂದಿಡೋಕೂ ಕಷ್ಟಪಟ್ಟ ರಾಮ್‌ಚರಣ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ನಟ ರಾಮಚರಣ್‌ ಈಗಷ್ಟೇ ಅವಳಿ ಮಕ್ಕಳ ತಂದೆಯಾಗಿದ್ದಾರೆ. ರಾಮ್‌ ಚರಣ್‌ ಹಾಗೂ ಉಪಾಸನಾಗೆ ಎರಡು ವರ್ಷದ ಮಗಳಿದ್ದು, ಪತ್ನಿ ಈಗಷ್ಟೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು.

ಉಪಾಸನಾ ಅಡ್ಮಿಟ್‌ ಆಗಿರುವ ಆಸ್ಪತ್ರೆಗೆ ರಾಮ್‌ಚರಣ್‌ ಆಗಮಿಸಿದ್ದು, ಅಭಿಮಾನಿಗಳಿಂದ ತೀವ್ರ ಬೇಸರವಾಗಿದ್ದಾರೆ. ಎರಡು ವರ್ಷದ ಮಗಳನ್ನು ಎತ್ತಿಕೊಂಡು, ಮುಖ ಕವರ್‌ ಮಾಡಿಕೊಂಡು ಆಸ್ಪತ್ರೆಗೆ ಹೋಗುವಾಗ ಜನ ಮುತ್ತಿಕೊಂಡಿದ್ದಾರೆ.

ರಾಮ್ ಚರಣ್ ಅವರು ಮನೆಯಿಂದ ಆಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಅವರ ಕೈಯಲ್ಲಿ ಎರಡು ವರ್ಷದ ಮಗಳು ಕೂಡ ಇದ್ದರು. ಆಸ್ಪತ್ರೆ ಬಳಿ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದರು. ಇದನ್ನು ನೋಡಿ ರಾಮ್ ಚರಣ್ ಶಾಕ್ ಆಗಿದ್ದಾರೆ. ರಾಮ್ ಚರಣ್ ಅವರ ಭದ್ರತಾ ಸಿಬ್ಬಂದಿ, ಪೊಲೀಸರು ಎಷ್ಟೇ ಪ್ರಯತ್ನಿಸಿದರೂ ಅಭಿಮಾನಿಗಳನ್ನು ದೂರಕ್ಕೆ ತಳ್ಳೋಕೆ ಸಾಧ್ಯವಾಗಿಲ್ಲ.

ಅಭಿಮಾನಿಗಳ ಕಿರುಚಾಟ, ಕೂಗಾಟ, ತಳ್ಳಾಟದ ಮಧ್ಯೆಯೇ ಅವರು ಆಸ್ಪತ್ರೆಗೆ ಒಳಗೆ ಬಂದಿದ್ದಾರೆ. ರಾಮ್ ಚರಣ್ ಒಬ್ಬರೇ ಇದ್ದಿದ್ದರೆ ಇದನ್ನು ಹೇಗೋ ಮ್ಯಾನೇಜ್ ಮಾಡುತ್ತಿದ್ದರು. ಆದರೆ, ಅವರ ಬಳಿ ಮಗು ಇತ್ತು. ಇದನ್ನು ಕರೆದುಕೊಂಡು ಸೇಫ್ ಆಗಿ ಆಸ್ಪತ್ರೆ ಸೇರೋದು ದೊಡ್ಡ ಸವಾಲಾಗಿತ್ತು. ಮಗುವನ್ನು ಕರೆದುಕೊಂಡು ಒಳ ಹೋಗುವ ವೇಳೆಗೆ ಅವರು ಸುಸ್ತಾಗಿ ಹೋಗಿದ್ದಾರೆ. ಅಭಿಮಾನ ಅತಿಯಾದ್ರೆ ಉಸಿರುಗಟ್ಟುತ್ತದೆ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !