February 2, 2026
Monday, February 2, 2026
spot_img

T20 ವಿಶ್ವಕಪ್‌ ಆರಂಭಕ್ಕೂ ಮುನ್ನವೇ ಆಸ್ಟ್ರೇಲಿಯಾಗೆ ಶಾಕ್: ಹೇಝಲ್‌ವುಡ್ ಅಲಭ್ಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫೆ 7ರಿಂದ ಟಿ20 ವಿಶ್ವಕಪ್‌ ಆರಂಭವಾಗಲಿದ್ದು, ಆಸ್ಟ್ರೇಲಿಯಾ ತನ್ನ 15 ಆಟಗಾರರ ತಂಡವನ್ನು ಘೋಷಿಸಿದ್ದರೂ, ಟೂರ್ನಿ ಆರಂಭಕ್ಕೂ ಮುನ್ನವೇ ಫಿಟ್‌ನೆಸ್ ಸಮಸ್ಯೆಗಳು ತಂಡಕ್ಕೆ ತಲೆನೋವಾಗಿವೆ.

ಅನುಭವಿ ವೇಗಿ ಜೋಶ್ ಹೇಝಲ್‌ವುಡ್ ತಂಡದಲ್ಲಿ ಇದ್ದರೂ, ಅವರು ಪ್ರಾರಂಭಿಕ ಪಂದ್ಯಗಳಲ್ಲಿ ಕಣಕ್ಕಿಳಿಯುವುದಿಲ್ಲ ಎಂಬುದು ಈಗ ಬಹುತೇಕ ಖಚಿತವಾಗಿದೆ.

ಮಂಡಿರಜ್ಜಿನ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಹೇಝಲ್‌ವುಡ್ ಸಂಪೂರ್ಣ ಫಿಟ್ ಆಗಲು ಇನ್ನೂ ಕೆಲ ದಿನಗಳ ಸಮಯ ಬೇಕಿದೆ. ಇದರಿಂದಾಗಿ ಗ್ರೂಪ್ ಹಂತದ ಆರಂಭಿಕ ಪಂದ್ಯಗಳಿಗೆ ಅವರನ್ನು ವಿಶ್ರಾಂತಿಯಲ್ಲಿ ಇರಿಸಲು ತಂಡ ನಿರ್ಧರಿಸಿದೆ.

ಇದನ್ನೂ ಓದಿ:

ಇನ್ನೊಂದೆಡೆ ಆಸ್ಟ್ರೇಲಿಯಾ ದೊಡ್ಡ ಹಿನ್ನಡೆ ಅನುಭವಿಸಿದೆ. ಬೆನ್ನಿನ ಕೆಳಭಾಗದ ನೋವಿನಿಂದ ಬಳಲುತ್ತಿರುವ ಪ್ಯಾಟ್ ಕಮಿನ್ಸ್ ಟಿ20 ವಿಶ್ವಕಪ್‌ನಿಂದಲೇ ಹೊರಗುಳಿದಿದ್ದಾರೆ. ಅವರ ಗಾಯ ಇನ್ನೂ ಸಂಪೂರ್ಣವಾಗಿ ಗುಣಮುಖವಾಗಿಲ್ಲದ ಕಾರಣ ಆಯ್ಕೆ ಸಮಿತಿಯು ಈ ನಿರ್ಧಾರ ಕೈಗೊಂಡಿದೆ.

ಕಮಿನ್ಸ್ ಬದಲಿಗೆ ಎಡಗೈ ವೇಗಿ ಬೆನ್ ದ್ವಾರ್ಶುಯಿಸ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ. ಮಿಚೆಲ್ ಮಾರ್ಷ್ ನಾಯಕತ್ವದ ಆಸ್ಟ್ರೇಲಿಯಾ ತಂಡದಲ್ಲಿ ಟ್ರಾವಿಸ್ ಹೆಡ್, ಗ್ಲೆನ್ ಮ್ಯಾಕ್ಸ್‌ವೆಲ್, ಸ್ಟೊಯಿನಿಸ್, ಝಂಪಾ ಸೇರಿದಂತೆ ಪ್ರಮುಖ ಆಟಗಾರರಿದ್ದಾರೆ. ಫಿಟ್‌ನೆಸ್ ಸವಾಲುಗಳ ನಡುವೆಯೂ ಆಸ್ಟ್ರೇಲಿಯಾ ಬಲಿಷ್ಠ ಪ್ರದರ್ಶನ ನೀಡುವ ವಿಶ್ವಾಸದಲ್ಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !