ವಿಟಮಿನ್ ಸಪ್ಲಿಮೆಂಟ್‌ಗಳನ್ನು ಸರಿಯಾದ ಸಮಯಕ್ಕೆ, ಸರಿಯಾದ ಆಹಾರದ ಜತೆ ತೆಗೆದುಕೊಳ್ಳುವುದು ಉತ್ತಮ. ಯಾವೆಲ್ಲಾ ವಿಟಮಿನ್‌ಗಳನ್ನು ಯಾವ ಸಮಯದಲ್ಲಿ ಸೇವಿಸಬೇಕು? ಇಲ್ಲಿದೆ ಮಾಹಿತಿ..
ವಿಟಮಿನ್ ಎ, ಡಿ,ಇ,ಕೆಯನ್ನು ಮಧ್ಯಾಹ್ನ ಸೇವಿಸಿ. ಈ ವಿಟಮಿನ್‌ಗಳು ಸರಿಯಾಗಿ ದೇಹಕ್ಕೆ ಸೇರಬೇಕು ಎಂದಾದರೆ ಫ್ಯಾಟ್ ಜೊತೆ ಇದನ್ನು ಸೇವಿಸಿ. ಮಧ್ಯಾಹ್ನ ಡ್ರೈ ಫ್ರೂಟ್ಸ್, ಅವಕಾಡೋ, ಫ್ಯಾಟಿ ಫಿಶ್ ಸೇವಿಸಿ ನಂತರ ಮಾತ್ರೆ ತೆಗೆದುಕೊಳ್ಳಿ.
ಮಲ್ಟಿವಿಟಮಿನ್ಸ್ ಮಾತ್ರೆಯನ್ನು ತಿಂಡಿಯ ನಂತರ ತೆಗೆದುಕೊಳ್ಳೋದು ಉತ್ತಮ
ಇದನ್ನೂ ಓದಿ: Viral | ಎಷ್ಟೇ ಕಾದ್ರೂ ಆ್ಯಂಬುಲೆನ್ಸ್ ಬರಲೇ ಇಲ್ಲ! ರಸ್ತೆ ಬದಿಯಲ್ಲಿ ಟಾರ್ಚ್ ಬೆಳಕಿನಲ್ಲೇ ಹೆರಿಗೆ ಆಗೋಯ್ತು!
ವಿಟಮಿನ್ ಸಿಯನ್ನು ಬೆಳಗ್ಗೆ ಅಥವಾ ಮಧ್ಯಾಹ್ನ ಸೇವಿಸಿ, ರಾತ್ರಿ ಸೇವಿಸಿದರೆ ಆಸಿಡ್ ರಿಫ್ಲಕ್ಸ್ ಆಗುವ ಸಾಧ್ಯತೆ ಇದೆ.
ಐರನ್ ಮಾತ್ರೆಯನ್ನು ಖಾಲಿ ಹೊಟ್ಟೆಗೆ ಸೇವಿಸಿ, ಆರೆಂಜ್ ಜ್ಯೂಸ್ ಜತೆಗೂ ಸೇವಿಸಬಹುದು
ಮೆಗ್ನಿಷಿಯಮ್ ಮಾತ್ರೆಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಿ. ಇದು ಆರೋಗ್ಯಕ್ಕೆ ಉತ್ತಮವಾಗಿದೆ.



