ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕದ ಬೆನ್ನಲ್ಲೇ ಈಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಪಡಿತರ ಚೀಟಿಗಳ ಬೃಹತ್ ಅಕ್ರಮ ಬೆಳಕಿಗೆ ಬಂದಿದೆ. ಅರ್ಹ ಬಡವರ ಹೊಟ್ಟೆ ಸೇರಬೇಕಿದ್ದ ಅನ್ನವನ್ನು ಉದ್ಯಮಿಗಳು ಮತ್ತು ಶ್ರೀಮಂತರು ಲೂಟಿ ಮಾಡುತ್ತಿರುವುದು ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಬಿಜೆಪಿ ಶಾಸಕ ಹರೀಶ್ ಖುರಾನಾ ಅವರು ಈ ಕುರಿತು ಮಾಹಿತಿ ನೀಡಿದ್ದು, ಸುಮಾರು 2 ಲಕ್ಷಕ್ಕೂ ಅಧಿಕ ಅನರ್ಹ ಕಾರ್ಡ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ತಿಳಿಸಿದ್ದಾರೆ.
ಸತ್ತು ಹೋದ 6,038 ಜನರ ಹೆಸರಿನಲ್ಲಿ ಇಂದಿಗೂ ರೇಷನ್ ಪಡೆಯಲಾಗುತ್ತಿದೆ. ವಾರ್ಷಿಕ 6 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ 1.44 ಲಕ್ಷ ಮಂದಿ ಬಿಪಿಎಲ್ ಪಟ್ಟಿಯಲ್ಲಿದ್ದಾರೆ.
ಕಾರು ಮತ್ತು ಇತರೆ ವಾಹನಗಳನ್ನು ಹೊಂದಿರುವ 77,000 ಮಂದಿ ಸರ್ಕಾರದ ಅಕ್ಕಿ-ಬೇಳೆಗೆ ಕೈಯೊಡ್ಡುತ್ತಿದ್ದಾರೆ. 25 ಲಕ್ಷಕ್ಕೂ ಅಧಿಕ ವಹಿವಾಟು ನಡೆಸಿ GST ಪಾವತಿಸುವ 2,700 ವ್ಯಾಪಾರಿಗಳು ಈ ಪಟ್ಟಿಯಲ್ಲಿದ್ದಾರೆ. ಸುಮಾರು 16,000 ಸಂಪೂರ್ಣ ನಕಲಿ ಕಾರ್ಡ್‌ಗಳನ್ನು ಸೃಷ್ಟಿಸಲಾಗಿದೆ.
ಇದನ್ನೂ ಓದಿ:
“ಬಡವರಿಗೆ ಸಿಗಬೇಕಾದ ಸಬ್ಸಿಡಿ ಹಣ ಮತ್ತು ಆಹಾರ ಧಾನ್ಯಗಳು ಅನರ್ಹರ ಪಾಲಾಗುತ್ತಿವೆ. ಭೂಮಾಲೀಕರು ಮತ್ತು ಕಾರು ಮಾಲೀಕರು ಬಿಪಿಎಲ್ ಸೌಲಭ್ಯ ಪಡೆಯುತ್ತಿರುವುದು ದುರದೃಷ್ಟಕರ,” ಎಂದು ಹರೀಶ್ ಖುರಾನಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.



